Monday, January 30, 2023

ಇದೊಂದು ಐತಿಹಾಸಿಕ ನಡಿಗೆ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ: ಡಿಕೆಶಿ

Must read

ರಾಮನಗರ: ಇದೊಂದು ಐತಿಹಾಸಿಕ ನಡಿಗೆ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರ್ಶವಿಲ್ಲದೆ ಸತ್ತರೂ ಅವಮಾನ. ಹಾಗಾಗಿ, ಈ ಹೋರಾಟವನ್ನ ಹಮ್ಮಿಕೊಂಡಿದ್ದೇವೆ. ಬಿಜೆಪಿ, ಜೆಡಿಎಸ್​ನವರು ಟೀಕೆ ಮಾಡ್ತಿದ್ದಾರೆ. ಅವರು ಯಾವ ಟೀಕೆ ಬೇಕಾದ್ರೂ ಮಾಡಲಿ. ನಮ್ಮ‌ಹೋರಾಟ ಮುಂದುವರಿಯಲಿದೆ.

ಇದು ನಮ್ಮ‌ಹೋರಾಟವಲ್ಲ, ಜನರ ಹೋರಾಟ. ದೆಹಲಿ ಪಾರ್ಲಿಮೆಂಟ್ ಮುಂದೆ ಧರಣಿ ಕೂರ್ತೇವೆ. ನಾವೇ ಮುಂದೆ ಗುದ್ದಲಿ ಪೂಜೆ ಮಾಡ್ತೇವೆ ಎಂದರು.

ನಟ ನೆನಪಿರಲಿ ಪ್ರೇಮ್​ ಮಾತನಾಡಿ, ನಾನು ಸಾಮಾನ್ಯನಾಗಿ ಬಂದಿದ್ದೇನೆ. ಜನರ ಕುಡಿಯುವ ನೀರಿಗಾಗಿ ಬಂದಿದ್ದೇನೆ. ನಾವೆಲ್ಲರೂ ಈ ಹೋರಾಟಕ್ಕೆ ಬೆಂಬಲಿಸಬೇಕು ಎಂದರು.

Latest article