Thursday, January 27, 2022

ಸದಾ ಧರ್ಮದ ಹೆಸರಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸುವುದು: RSS ವಿರುದ್ಧ ಯತೀಂದ್ರ ಸಿಡಿಮಿಡಿ

Must read

ಮೈಸೂರು: ಸ್ವತಂತ್ರಕ್ಕೋಸ್ಕರ ಹೋರಾಟ ಮಾಡಿರುವ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿದೆ ಎಂದು ಶಾಸಕ ಡಾ.ಯತೀಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ನಡೆದ ಘಟನೆಯಲ್ಲಿ ಮೊದಲು ಪ್ರಚೋದನೆ ಮಾಡಿದ್ದು ಬಿಜೆಪಿ ಪಕ್ಷ. ರಾಜ್ಯ ಸರ್ಕಾರದ ಸಚಿವರಾಗಿದ್ದು ಡಾ.ಅಶ್ವಥ್ ನಾರಾಯಣ್ ಬಾಯಲ್ಲಿ ಆ ಮಾತು ಬರಬಾರದು. ರಾಜ್ಯದ ಮುಖ್ಯಮಂತ್ರಿ ವೇದಿಕೆ ಮೇಲೆ ಇರುವಾಗ. ಗಂಡಸ್ತನ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಪಕ್ಷದ ನೀಚ ಸಂಸ್ಕೃತಿಯ ಬಗ್ಗೆ ಜನರಿಗೆ ತಿಳಿದಿದೆ ಎಂದರು.

ಇನ್ನು ಬಿಜೆಪಿ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಆರ್​ಎಸ್​ಎಸ್​​ ಸಂಘ ಪರಿವಾರಗಳ ಕೆಲಸವೇ ಇದು. ಸದಾ ಧರ್ಮದ ಹೆಸರಿನಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸುವುದು. ಚರ್ಚ್​ಗಳ ಮೇಲೆ ದಾಳಿ ಮಾಡುವುದು. ನಿಜಕ್ಕೂ ಅನ್ ಕಲ್ಚರ್, ಗೂಂಡಾ ಸಂಸ್ಕೃತಿ ಹೊಂದಿದ ಪಕ್ಷ ಬಿಜೆಪಿ. ನಿಜಕ್ಕೂ ಪ್ರತಿಭಟನೆ ಮಾಡಬೇಕಿರುವುದು ಕಾಂಗ್ರೆಸ್ ಪಕ್ಷ. ಸಚಿವರಾಗಿ ನಮ್ಮ ಪಕ್ಷದ ಸಂಸದರ ಬಗ್ಗೆ ಅಸಭ್ಯವಾಗಿ ಮಾತನಾಡಿದಾಗ ನಾವು ಸುಮ್ಮನಿರಬೇಕೆ. ಹಾಗಾಗಿ ನಾವು ಯಾರನ್ನು ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದರು.

Latest article