ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ದಳಪತಿಗಳು ಮತ್ತೆ ಮುಗಿಬಿದಿದ್ದಾರೆ. ನಿನ್ನೆ ಜೆಡಿಎಸ್ ಶಾಸಕರಿಗೆ ರೆಬೆಲ್ ಲೇಡಿ ಸುಮಲತಾ ಓಪನ್ ಚಾಲೆಂಜ್ ಹಾಕಿದ್ದರು. ಮೈ ಶುಗರ್ಗೆ ನಿಮ್ಮ ಕೊಡುಗೆ ಏನೆಂದು ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಪ್ರಶ್ನೆ ಮಾಡಿದ್ದರು. ಈ ಹಿನ್ನೆಲೆ ಸಂಸದೆ ಸುಮಲತಾ ವಿರುದ್ಧ ಶಾಸಕ ಕೆ.ಅನ್ನದಾನಿ ತಿರುಗಿಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸಂಸದೆಗೆ ಮಳವಳ್ಳಿ ಜೆಡಿಎಸ್ ಶಾಸಕ ತಿರುಗೇಟು ನೀಡಿದ್ದಾರೆ.
ಮೈ ಶುಗರ್ ಪಾದಯಾತ್ರೆಯ ವಿಡಿಯೋವನ್ನ ಶಾಸಕ ಅನ್ನದಾನಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿ ತಿರುಗೇಟು ನೀಡಿದ್ದಾರೆ. ಮೈ ಶುಗರ್ಗೆ ನಿಮ್ಮ ಕೊಡುಗೆ ಏನೆಂದು ಪ್ರಶ್ನಿಸಿದ್ದ ಸಂಸದೆಗೆ ಜೆಡಿಎಸ್ ಪಾದಯಾತ್ರೆಯ ವಿಡಿಯೋ ಹಾಕಿದ್ದಾರೆ. ಅಲ್ಲದೇ ಈ ವಿಡಿಯೋವನ್ನ ಸಂಸದೆ ಸುಮಲತಾಗೆ ಶಾಸಕ ಅನ್ನದಾನಿ ಅರ್ಪಣೆ ಮಾಡಿದ್ದಾರೆ. ಶಾಸಕ ಕೆ.ಅನ್ನದಾನಿ ಪಾದಯಾತ್ರೆ ಬಗ್ಗೆ ವ್ಯಂಗ್ಯವಾಡಿದ್ದ ಸಂಸದೆ, ಮನೆಯಲ್ಲೇ ಪಾದಯಾತ್ರೆ ಮಾಡಿದ್ರೇನೊ ಗೊತ್ತಿಲ್ಲ ಎಂದಿದ್ದರು. ಆದ್ದರಿಂದ ಸಂಸದೆ ಸುಮಲತಾಗೆ ಶಾಸಕರಿಗೆ ಅರಿವಿನ ಚಾಟಿ ಬೀಸಿದ್ದಾರೆ.
ನಾನು ಮಾಡಿದ ಪಾದಯಾತ್ರೆ ಸಂಸದೆಗೆ ಅರಿವಿಲ್ಲದ ಕಾರಣ ವಿಡಿಯೋ ಅರ್ಪಣೆ ಮಾಡುತ್ತಿದ್ದೇನೆ. ಮೈ ಶುಗರ್ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಪಾದಯಾತ್ರೆ ಮಾಡಲಾಗಿತ್ತು. ಮಳವಳ್ಳಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 37 ಕಿಲೋ ಮೀಟರ್ ಪಾದಯಾತ್ರೆ ಮಾಡಲಾಗಿತ್ತು ಎಂದು ಶಾಸಕ ಅನ್ನದಾನಿ ವಿಡಿಯೋ ಅಪ್ಲೋಡ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.