ಸಿದ್ದರಾಮಯ್ಯ ಬಾಹುಬಲಿ..ಡಿಕೆಶಿ ಕಟ್ಟಪ್ಪ-ಶ್ರೀ ರಾಮುಲು ವ್ಯಂಗ್ಯ

ಕಾಂಗ್ರೆಸ್​ ಅಧಿಕಾರಕ್ಕಾಗಿ ಷಡ್ಯಂತ್ರ ಮಾಡ್ತಿದೆ
ಸಿದ್ದರಾಮಯ್ಯ ಬಾಹುಬಲಿ..ಡಿಕೆಶಿ ಕಟ್ಟಪ್ಪ-ಶ್ರೀ ರಾಮುಲು ವ್ಯಂಗ್ಯ

ಬೆಂಗಳೂರು: ಸಿದ್ದರಾಮಯ್ಯ ನಾನೇ ಬಾಹುಬಲಿ ಅಂತ ಹೋಗ್ತಿದ್ದಾರೆ. ಆದರೆ ಹಿಂದೆ ಡಿಕೆ ಶಿವಕುಮಾರ್​ ಕಟ್ಟಪ್ಪ ರೀತಿ ಖಡ್ಗ ಹಿಡಿದು ಹೋಗ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್​ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಅಧಿಕಾರಕ್ಕಾಗಿ ಷಡ್ಯಂತ್ರ ಮಾಡುತ್ತಿದೆ. ಇದರ ಬಗ್ಗೆ ಅರುಣ್​ ಸಿಂಗ್​ ಅವರ ಬಳಿ ಹೇಳಿದ್ದೇನೆ ಎಂದರು.

ಇನ್ನು ನಾಯಕತ್ವ ಬದಲಾವಣೆ ಬಗ್ಗೆ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನಮ್ಮ ಪಾರ್ಟಿಯಲ್ಲಿ ಪಾರ್ಲಿಮೆಂಟರಿ ಬೋರ್ಡ್ ಇದೆ. ಅವರು ನಿರ್ಧಾರ ಮಾಡಿದರೆ ಮುಗಿಯಿತು. ಯಾವುದೇ ಗೊಂದಲಗಳಿಲ್ಲ. ಯಾವುದೇ ತೀರ್ಮಾನ ಇದ್ದರೂ ಹೈಕಮಾಂಡ್ ನಿರ್ಧರಿಸುತ್ತೆ. ಸುಮ್ಮನೆ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.

Related Stories

No stories found.
TV 5 Kannada
tv5kannada.com