ಹೋಟೆಲ್​ ಉದ್ಯಮಕ್ಕೆ ನೆರವು ನೀಡಿ-ಸಿಎಂಗೆ ಸಿದ್ದರಾಮಯ್ಯ ಪತ್ರ

ಹೋಟೆಲ್​ ಹಾಗೂ ವಸತಿ ಗೃಹಗಳ ವಿದ್ಯುತ್ ಶುಲ್ಕ ಮನ್ನಾ ಮಾಡಿ-ಸಿದ್ದರಾಮಯ್ಯ ಮನವಿ
ಹೋಟೆಲ್​ ಉದ್ಯಮಕ್ಕೆ ನೆರವು ನೀಡಿ-ಸಿಎಂಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ಹೋಟೆಲ್​ ಹಾಗೂ ವಸತಿ ಗೃಹಗಳ ವಿದ್ಯುತ್ ಶುಲ್ಕ ಮನ್ನಾ ಮಾಡಿ ನೆಲಕಚ್ಚಿರುವ ಈ ಉದ್ಯಮಗಳ ಕಡೆ ಗಮನ ಹರಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದ ನಾನಾಕಡೆ ಸಾವಿರಾರು ಹೊಟೇಲ್ ಬಂದ್ ಆಗಿವೆ. ಹೊಟೇಲ್,ಕ್ಯಾಂಟೀನ್ ಕಟ್ಟಡ ಬಾಡಿಗೆ ಕಟ್ಟಲಾಗ್ತಿಲ್ಲ. ಬಾಡಿಗೆ ಕಟ್ಟಲಾಗದೆ ಮಾಲೀಕರು ಪರದಾಡುತ್ತಿದ್ದಾರೆ. ಬ್ಯಾಂಕ್ ಸಾಲದ ಬಡ್ಡಿ ಬೆಳೆಯುತ್ತಲೇ ಇದೆ. ದೊಡ್ಡ ಹೊಟೇಲ್ ಮಾಲೀಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೊಟೇಲ್ ಕಾರ್ಮಿಕರು ಊಟಕ್ಕೆ ಪರದಾಡುತ್ತಿದ್ದಾರೆ. ೨೦ ಸಾವಿರಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರ ಕುಟುಂಬ ನಿರ್ವಹಣೆ ಕಷ್ಟದಲ್ಲಿದೆ. ಕಾರ್ಮಿಕರ ಮಕ್ಕಳು ಶಿಕ್ಷಣ ತೊರೆಯಬೇಕಾದ ಸ್ಥಿತಿ ಬಂದಿದೆ. ಇಡೀ ಸೇವಾವಲಯವೇ ಸ್ಥಗಿತಗೊಂಡಿದೆ. ಪ್ರವಾಸೋಧ್ಯಮ ನೆಚ್ಚಿಕೊಂಡಿದ್ದ ವಸತಿಗೃಹಗಳು ಸಂಕಷ್ಟದಲ್ಲಿವೆ. ಹೀಗಾಗಿ ರಾಜ್ಯ ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.

Related Stories

No stories found.
TV 5 Kannada
tv5kannada.com