Tuesday, August 16, 2022

ವಿಶ್ರಾಂತಿ ಬಳಿಕ ಪಾದಯಾತ್ರೆಗೆ ರೀ ಎಂಟ್ರಿ ಕೊಟ್ಟ ಸಿದ್ದರಾಮಯ್ಯ..!

Must read

ಬೆಂಗಳೂರು: ಎರಡು ದಿನಗಳ ಕಾಲ ಯಶಸ್ವಿಯಾಗಿರುವ ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಮೊದಲ ದಿನ ಜ್ವರದ ಕಾರಣ ಪಾದಯಾತ್ರೆಯಿಂದ ವಾಪಸ್​ ಆಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಮತ್ತೆ ಪಾದಯಾತ್ರೆಗೆ ತೆರಳಿದ್ದಾರೆ. ವೈದ್ಯರ ಸಲಹೆ ಮೇರೆಗೆ ಎರಡು ದಿನಗಳ ಕಾಲ ವಿಶ್ರಾಂತಿ ಪಡೆದ ಸಿದ್ದರಾಮಯ್ಯ ಅವರು ಇಂದು ಕನಕಪುರದಿಂದ ಪಾದಯಾತ್ರೆ ಆರಂಭಿಸಲಿದ್ದಾರೆ.

ನಿನ್ನೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು, ಇಂದು ಗುಂಡ್ಲುಪೇಟೆ, ನಂಜನಗೂಡು, ಮೈಸೂರು ಮಂಡ್ಯ ಭಾಗದ ಹಲವು ಕಡೆಯಿಂದ ಜನ ಸೇರುವ ಸಾಧ್ಯತೆಯಿದೆ. ಅಲ್ಲದೇ ಅನೇಕ ಕಾಂಗ್ರೆಸ್​ ನಾಯಕರೂ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

Latest article