Friday, January 21, 2022

ಪಾದಯಾತ್ರೆ ನಿಲ್ಲಿಸುವಂತೆ ಡಿ.ಕೆ ಶಿವಕುಮಾರ್​​ಗೆ ರಾಹುಲ್ ಗಾಂಧಿ ಸೂಚನೆ..!

Must read

ಬೆಂಗಳೂರು: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ನಿಲ್ಲಿಸುವಂತೆ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಅವರಿಗೆ ಸೂಚನೆ ನೀಡಿದ್ದಾರೆ.

ಡಿ.ಕೆ ಶಿವಕುಮಾರ್​ ಅವರಿಗೆ ಕರೆ ಮಾಡಿರುವ ರಾಹುಲ್​ ಗಾಂಧಿ 15 ನಿಮಿಷ ಮಾತನಾಡಿದ್ದು, ಪಾದಯಾತ್ರೆ ನಿಲ್ಲಿಸುವಂತೆ ತಿಳಿಸಿದ್ದಾರೆ.

ಇನ್ನು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ,  ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತನಾಡಿದ್ದು, ನಿಮ್ಮ ಪಾದಯಾತ್ರೆಯನ್ನು ಮೇಡಂ ಗಮನಿಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಗಮನಿಸುತ್ತಿದ್ದಾರೆ. ಹೋರಾಟದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಹೋರಾಟ ಇತರ ರಾಜ್ಯಗಳಿಗೂ ಮಾದರಿಯಾಗಲಿದೆ. ಸರ್ಕಾರದ ವಿರುದ್ಧದ ನಿಮ್ಮ ಹೋರಾಟ ಶ್ಲಾಘನೀಯ. ಆದರೆ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದೆ. ಅದನ್ನ ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡಿ. ನಿಮ್ಮ ಆರೋಗ್ಯ ಪಕ್ಷಕ್ಕೂ ‌ಬಹಳ ಮುಖ್ಯ ಎಂದು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Latest article