ಬಿಎಸ್​ವೈ ಇಳಿದರೆ ನಮ್ಮಲ್ಲೇ ಪರ್ಯಾಯ ನಾಯಕರಿದ್ದಾರೆ-ಪಂಚಮಸಾಲಿ ಶ್ರೀ

ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು
ಬಿಎಸ್​ವೈ ಇಳಿದರೆ ನಮ್ಮಲ್ಲೇ ಪರ್ಯಾಯ ನಾಯಕರಿದ್ದಾರೆ-ಪಂಚಮಸಾಲಿ ಶ್ರೀ

ಬೆಂಗಳೂರು: ಲಿಂಗಾಯತರಲ್ಲಿ ಪರ್ಯಾಯ ನಾಯಕತ್ವ ಇಲ್ಲ ಎಂಬುದು ಅವಮಾನ ಮಾಡುವ ಸಂಗತಿ. ಲಿಂಗಾಯತರಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದರೆ ಉತ್ತರ ಕರ್ನಾಟಕದ ನೆಲದಲ್ಲಿ ಪರ್ಯಾಯ ನಾಯಕರು ಇದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಅರುಣ್​ ಸಿಂಗ್​ ಭೇಟಿ ಬಳಿಕ ಮಾತನಾಡಿದ ಅವರು, ನಮ್ಮ ಸಮುದಾಯದಲ್ಲಿ ಸಿಎಂ ಸ್ಥಾನಕ್ಕೆ ಪರ್ಯಾಯ ನಾಯಕರು ಅನೇಕರಿದ್ದಾರೆ. ನಿಜಲಿಂಗಪ್ಪ ಬಿಟ್ಟರೆ ಯಾರಾಗುತ್ತಾರೆ ಎಂದು ಪ್ರಶ್ನೆ ಬಂದಿತ್ತು. ನಂತರ ಎಸ್.ಆರ್.ಕಂಠಿ, ವೀರೇಂದ್ರ ಪಾಟೀಲ್, ಜೆ‌‌.ಹೆಚ್.ಪಟೇಲ್ ,ಯಡಿಯೂರಪ್ಪ ಸಿಎಂ ಅದರು. ಸಿದ್ದಗಂಗಾ ಶ್ರೀಗಳು ಆಶೀರ್ವಾದ ಮಾಡಿದ ನಂತರ ಯಡಿಯೂರಪ್ಪ ನಮ್ಮವರು ಎಂದು ಗೊತ್ತಾಗಿದೆ. ಅಲ್ಲಿಯವರೆಗೆ ಯಡಿಯೂರಪ್ಪ ನಮ್ಮವರು ಎಂದು ಗೊತ್ತಿರಲಿಲ್ಲ ಎಂದರು.

ಇನ್ನು ಸಿಎಂ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದವರಿಗೆ ಕೊಡಿ. ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ನಮ್ಮ ಸಮಯದಾಯದವರು ರೇಸ್‌ನಲ್ಲಿ ಇದ್ದಾರೆ. ನಮ್ಮ ಸಮುದಾಯದ ಸಮರ್ಥ ನಾಯಕರು ಇದ್ದಾರೆ. ಕಳಂಕ ರಹಿತರು, ಕಪ್ಪುಚುಕ್ಕೆ ಇಲ್ಲದ, ಭ್ರಷ್ಟಾಚಾರ ಮಾಡದ ನಾಯಕರು ಇದ್ದಾರೆ. ಆಡಳಿತ ನಡೆಸುವ ಸಮರ್ಥ ನಾಯಕರು ಇದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Stories

No stories found.
TV 5 Kannada
tv5kannada.com