Wednesday, May 18, 2022

ಯಾರಾದ್ರೂ ಊಟ ಹಾಕ್ತಾರೆ ಅಂದ್ರೆ ಬೇಡ ಎನ್ನಲು ಆಗಲ್ಲ: ಜೆಡಿಎಸ್​ ಪರ ರೇಣುಕಾಚಾರ್ಯ ಬ್ಯಾಟಿಂಗ್​

Must read

ಬೆಂಗಳೂರು: ಯಾರಾದರೂ ಊಟ ಹಾಕ್ತಾರೆ ಎಂದರೇ ಬೇಡ ಎನ್ನಲು ಆಗುವುದಿಲ್ಲ. ಜೆಡಿಎಸ್​ ಬೆಂಬೆಲ ಸಿಕ್ಕರೆ ಬಿಜೆಪಿ ಅಭ್ಯರ್ಥಿಗಳಿಗೆ ಲಾಭ ಅಲ್ವಾ. ಚುನಾವಣೆಯಲ್ಲಿ ಗೆಲವು ಮುಖ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಕೆಲವು ಭಾರಿ ರಾಜಕೀಯವಾಗಿ ಟೀಕೆ ಮಾಡುತ್ತೇವೆ. ಆದರೆ ಅವರಿಗೂ ಸಾಮರ್ಥ್ಯವಿದೆ ಆದ್ದರಿಂದ ಅವರು ಬಿಜೆಪಿಗೆ ಬೆಂಬಲ ಕೊಡುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಇನ್ನು ರಾಜಕಾರಣದದಲ್ಲಿ ಯಾರು ಶತ್ರುನೂ, ಮಿತ್ರರು ಅಲ್ಲ. ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಕೇವಲ ಸಂದರ್ಭದಲ್ಲಿ ಹೊಂದಾಣಿಕೆ ಆಗಬಹುದು. ಜೆಡಿಎಸ್​ನವರಿಗೆ ಕೆಲವು ಕಡೆ ಶಕ್ತಿಯಿದೆ. ಹಾಗಾಗಿ ಬಿಜೆಪಿಗೆ ಬೆಂಬಲ ಕೊಡ್ತಾರೆ ಎಂದು ನಮ್ಮ ನಾಯಕರು ಬೆಂಬಲ ಕೇಳಿರಬಹುದು. ಅದನ್ನು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಅವರು ಸ್ಪರ್ಧೆ ಮಾಡದೇ ಇರುವ ಕಡೆ ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ಕೊಡಲಿ ಎಂದರು.

Latest article