Tuesday, August 16, 2022

ಮದರಸಾಗಳನ್ನು ಬ್ಯಾನ್ ಮಾಡಬೇಕು, ಅಲ್ಲಿ ಶಸ್ತ್ರಾಸ್ತ ತರಬೇತಿ ನೀಡಲಾಗುತ್ತಿದೆ: ಕೆ.ಎಸ್.ಈಶ್ವರಪ್ಪ

Must read

ಶಿವಮೊಗ್ಗ: ರಾಜಸ್ಥಾನದ ಕನ್ನಯ್ಯನ ಕೊಲೆ ಕೇವಲ ಒಬ್ಬನ ಕೊಲೆಗೆ ಸೀಮಿತ ಅಲ್ಲ. ದೇಶದ ಇಡೀ ಹಿಂದೂ ಸಮಾಜಕ್ಕೆ ಇದು ಸವಾಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಗುಂಡಪ್ಪ ಶೆಡ್​ನಲ್ಲಿರುವ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಅನೇಕ ಶ್ರದ್ಧಾ ಕೇಂದ್ರಗಳ ಅಪಮಾನವನ್ನು ಹಿಂದೂ ಸಮಾಜ ಸಹಿಸಿಕೊಂಡು ಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸ ಮಾಡಿ, ಬಾಬರಿ ಮಸೀದಿ ಕಟ್ಟಲಾಯ್ತು. ಅಪಮಾನವನ್ನು ನೂರಾರು ವರ್ಷ ಸಹಿಸಿಕೊಂಡು ಬಂದೆವು.ಇವತ್ತು ಕಾಶಿಯಲ್ಲಿ ಶಿವಲಿಂಗದ ಬಳಿ ಕಾಲು ತೊಳೆದುಕೊಂಡು ಹೋಗಿ ಅವಮಾನ ಮಾಡಿದರು. ಇನ್ನು ಮಥುರಾದಲ್ಲಿ ಕೃಷ್ಣನ ದೇವಾಲಯದ ಸ್ಥಿತಿ ಕೂಡ ಹಾಗೇ ಆಗಿದೆ.

ಹಿಂದೂ ಸಮಾಜ ಶಾಂತಿಯಿಂದ ಇರುವ ಸಂದರ್ಭದಲ್ಲಿ ಹೀಗೆ ಮಾಡ್ತಿದ್ದಾರೆ. ನೂಪುರ್ ಶರ್ಮಾ ಪೈಗಂಬರ್ ಹೇಳಿಕೆ ಬಗ್ಗೆ ಮುಸಲ್ಮಾನ ದೇಶಗಳು ದೊಡ್ಡ ಪ್ರತಿಭಟನೆ ಮಾಡಿದವು. ಇಂದು ಸಾಮಾನ್ಯ ಹಿಂದೂ ಟೈಲರ್ ಅನ್ನು ಕಗ್ಗೋಲೆ ಮಾಡಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರಿಗೂ ವಿಡಿಯೋ ಮೂಲಕ ಬೆದರಿಕೆ ಹಾಕಿದ್ದಾರೆ. ಇದು ಒಂದು ಕಡೆ ಅಪಮಾನ. ಇನ್ನೊಂದು ಕಡೆ ಸವಾಲು ಕೂಡ. ಘಟನೆಯಾದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜಸ್ಥಾನ ಸಿಎಂ ಶಾಂತಿ ಕಾಪಾಡಬೇಕು ಅಂತಾರೆ.

ಆದರೆ, ಮುಸಲ್ಮಾನ ಗುಂಡಾಗಳು ಮಾಡಿದ ಕೃತ್ಯದ ಬಗ್ಗೆ ಮಾತನಾಡಿಲ್ಲ. ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಸಹ ಹೇಳ್ತಿಲ್ಲ. ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡುತ್ತಿಲ್ಲ. ಪ್ರಧಾನಿ ಮೋದಿಯವರಿಗೆ ನಾನು ಒತ್ತಾಯ ಮಾಡ್ತೇನೆ. ಈಗಿರುವ ಕಾನೂನಿನಿಂದ ಮುಸಲ್ಮಾನ ರಾಷ್ಟ್ರದ್ರೋಹಿಗಳಿಗೆ ಶಿಕ್ಷೆ ಆಗಲ್ಲ. ಕೊಲೆ ಮಾಡಿರುವ ಬಗ್ಗೆ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.ಇಷ್ಟಾದರೂ ಕಾನೂನಿನಲ್ಲಿ ಬಲವಿಲ್ಲದ ಕಾರಣ ಮತ್ತೆ ಅವರು ಹೊರಗೆ ಬರ್ತಾರೆ. ಅವರೇ ಒಪ್ಪಿಕೊಂಡ ಮೇಲೆ ಗಲ್ಲು ಶಿಕ್ಷೆ ವಿಧಿಸುವಂತ ಕಾನೂನು ಬರಬೇಕು. ಹೀಗಾಗಿ ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರು ಕಾನೂನು ತರಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು. ಕೊಲೆಗಡುಕರು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡ ಮೇಲೆ ವಿಚಾರಣೆಯ ಅಗತ್ಯವಿಲ್ಲ..

Also read:  ಸತ್ತ ಮಗನ ಬಗ್ಗೆ ಮಾತನಾಡುವವರಿಗೆ ಮಾನ, ಮಾರ್ಯಾದೆ ಇಲ್ಲ: ಸಿದ್ದರಾಮಯ್ಯ ಬೇಸರ

ಕೊಲೆಗಡುಕ ಎಂದು ತೀರ್ಮಾನವಾದ ಕೂಡಲೇ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಅಥವಾ ಗಲ್ಲಿಗೇರಿಸಬೇಕು. ನೂಪುರ್ ಅವರ ಹೇಳಿಕೆಯಿಂದ ಇಷ್ಟು ಪ್ರತಿಭಟನೆ ಮಾಡುತ್ತಾರೆ. ಕನ್ನಯ್ಯ ರೀತಿಯಲ್ಲೇ ಮೋದಿಯನ್ನು ಕೊಲೆ ಮಾಡುತ್ತೇವೆ ಎಂದವರನ್ನು ಸುಮ್ಮನೆ ಬಿಡಬೇಕಾ. ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು‌. ಇಲ್ಲವೇ ಅಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಪ್ರಧಾನಿಯನ್ನು ಕೊಲ್ಲುತ್ತೇವೆ ಎಂದು ಹೇಳಿರುವ ಹೇಳಿಕೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಬೇಕು‌. ಜೊತೆಗೆ ಉಗ್ರರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕು. ಮುಂದೆ ಹಿಂದೂಗಳ ಆಕ್ರೋಶದಿಂದ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂದು ಎಚ್ಚರಿಕೆ ನೀಡಿದರು.

Also read:  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ತಿದ್ದುಪಡಿಗಳಿಗೆಲ್ಲಾ ಹಿಂದಿನ ಸ್ಥಿತಿಗೆ ತರುತ್ತೇವೆ ​ - ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಅವರು ತುರ್ತು ಅಧಿವೇಶನ ಕರೆದು ಈ ರೀತಿಯ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮದ ಕಾನೂನು ರೂಪಿಸಬೇಕು. ಕನ್ನಯ್ಯ ಕೊಲೆ ಪ್ರಕರಣ ಎನ್​ಐಎಗೆ ವಹಿಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ. ಕನ್ನಯ್ಯ ಹಿಂದೂ ಪ್ರತೀಕ. ಅಮಿತ್ ಶಾ ಅವರು ಸರಿಯಾದ ರಾಷ್ಟ್ರಭಕ್ತ. ದೇಶದ್ರೋಹಿಗಳನ್ನು ಮಟ್ಟಹಾಕುವ ಉದ್ದೇಶದಿಂದಲೇ ಅವರನ್ನು ಗೃಹಮಂತ್ರಿ‌ ಮಾಡಲಾಗಿದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು. ಅಲ್ಲಿ ಶಸ್ತ್ರಾಸ್ತ ತರಬೇತಿ ನೀಡಲಾಗುತ್ತಿದೆ ಎಂದರು.

 

 

Latest article