Monday, November 29, 2021

ಇನ್ನೂ ಗಟ್ಟಿಯಾಗಿದ್ದಿನಿ ಎಂದ ಲಾಲು ಪ್ರಸಾದ್ ಯಾದವ್

Must read

ಪಾಟ್ನಾ(ಬಿಹಾರ): ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್‌ ತೆರೆದ ಜೀಪ್‌ ಚಲಾಯಿಸುವ ಮೂಲಕ ತಾನು ಇನ್ನೂ ಗಟ್ಟಿಯಾಗಿದ್ದೇನೆ ಎಂಬ ಸಂದೇಶ ರವಾನಿಸಿದರು. ತಮ್ಮ ಪತ್ನಿ ಹಾಗೂ ಮಾಜಿ ಸಿಎಂ ರಾಬ್ಡಿ ದೇವಿ ಅವರಿಗೆ ಮಂಜೂರಾಗಿದ್ದ ಬಂಗಲೆಯ ಆವರಣದಿಂದ ಹೊರಟ ಲಾಲೂ, ತಮ್ಮ ಅನಾರೋಗ್ಯದ ಹೊರತಾಗಿಯೂ ಪಾಟ್ನಾದ ಕೆಲ ಬೀದಿಗಳಲ್ಲಿ ಜೀಪ್‌ ಚಲಾಯಿಸಿದ್ದಾರೆ. ಈ ವಿಡಿಯೋವನ್ನು ಅವರೇ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಸೋಮವಾರದಿಂದ ಲಾಲೂ ಪ್ರಸಾದ್‌ ಯಾದವ್‌ ಪಾಟ್ನಾದಲ್ಲಿ ಇದ್ದಾರೆ.
ವರ್ಷಗಳ ನಂತರ ಇಂದು ಮೊದಲ ಬಾರಿಗೆ ವಾಹನವನ್ನು ಚಲಾಯಿಸಿದ್ದೇನೆ. ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ಯಾವುದಾದರೊಂದು ರೂಪದಲ್ಲಿ ಚಾಲಕರೇ ಆಗಿರುತ್ತಾರೆ. ಪ್ರೀತಿ, ಸೌಹಾರ್ದತೆ, ಸಮಾನತೆ, ಸಮೃದ್ಧಿ, ಸಹನೆ ಮತ್ತು ನ್ಯಾಯದ ವಾಹನವು ನಿಮ್ಮ ಜೀವನದಲ್ಲಿ ಸುಗಮವಾಗಿ ಸಾಗಲಿ ಎಂದು ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಕೆಲವು ತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದ ನಂತರ ದೆಹಲಿಯಲ್ಲಿ ತಂಗಿರುವ ಆರ್‌ಜೆಡಿ ವರಿಷ್ಠನಾಯಕ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಕಳೆದ ವಾರ ಖುದ್ದು ಹಾಜರಾಗುವಂತೆ ಆದೇಶ ನೀಡಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಪ್ರಜೇಶ್ ಕುಮಾರ್, ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ನಿಗದಿಪಡಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ಕೋರ್ಟ್‌ ಸುಮಾರು 200 ಸಾಕ್ಷಿಗಳನ್ನು ಪರಿಶೀಲನೆ ನಡೆಸಲಿದೆ.

Latest article