Tuesday, August 16, 2022

ಅವ್ರು ಕೇಸ್​ ಹಾಕಿದ್ರೂ..ಅರೆಸ್ಟ್​ ಮಾಡಿದ್ರೂ ಪಾದಯಾತ್ರೆ ನಿಲ್ಲಲ್ಲ-ಡಿ.ಕೆ ಶಿವಕುಮಾರ್​

Must read

ಬೆಂಗಳೂರು: ಬೆಳಗ್ಗೆಯಿಂದ ಪಾದಯಾತ್ರೆ ಕುರಿತು ಚರ್ಚೆ ಮಾಡಿದ್ದೇವೆ. ೧೦೦ ವೈದ್ಯರು,೧೦ ಆ್ಯಂಬುಲೆನ್ಸ್ ಸಿದ್ಧವಿದೆ. ಸಂಪೂರ್ಣ ನಿಯಮ ಪಾಲನೆಗೆ ಮುಂದಾಗಿದ್ದೇವೆ. ರಾಜ್ಯದ ಎಲ್ಲಾ ಕಡೆಗಳಿಂದ ಭಾಗಿಯಾಗ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ದಿನ ಮೈಸೂರು ಜಿಲ್ಲೆಯವರು ಪಾದಯಾತ್ರೆಯಲ್ಲಿ ಸೇರಿಕೊಳ್ಳುತ್ತಾರೆ. ೫ನೇ ದಿನ ಮಂಡ್ಯ,ಹಾಸನದವರು ಬರ್ತಾರೆ. ನಂತರ ತುಮಕೂರಿನವರುಪಾದಯಾತ್ರೆಯಲ್ಲಿ ಭಾಗಿಯಾಗ್ತಾರೆ. ಈಗಾಗಲೇ ೧೮೦೦ ಜನ ಪಾದಯಾತ್ರೆಗೆ ನೊಂದಣಿ ಮಾಡಿದ್ದಾರೆ. ೧೯ರವರೆಗೆ ಈ ಪಾದಯಾತ್ರೆ ನಡೆಯಲಿದೆ ಎಂದರು.

ಇನ್ನು ಬಿಜೆಪಿಯವರು ಬಹಿರಂಗ ಸಭೆ ಮಾಡಬಹುದು. ಜನಾಶೀರ್ವಾದ ಯಾತ್ರೆ ಮಾಡಬಹುದು. ಹಾಗೇ ನಾವು ನೀರಿಗಾಗಿ ಪಾದಯಾತ್ರೆ ಮಾಡುತ್ತೇವೆ. ಏನೇ ಮಾಡಿದ್ರೂ ಪಾದಯಾತ್ರೆ ನಿಲ್ಲಿಸಲ್ಲ. ಅವರು ಅರೆಸ್ಟ್ ಬೇಕಾದ್ರೂ ಮಾಡಲಿ. ಕೇಸ್ ಆದ್ರೂ ದಾಖಲಿಸಲಿ. ನಮ್ಮ ಪಾದಯಾತ್ರೆ ನಡೆದೇ ನಡೆಯುತ್ತದೆ. ಸಿಎಂ ಅವರು ಒಂದು ಕಾರ್ಯಕ್ರಮದಲ್ಲಿ ಸಿಕ್ಕಿದ್ದರು. ಆಸ್ಪತ್ರೆಗಳಿಗೆ ನಾನೇ ಹೇಳಿದ್ದೇನೆ ಅಂತ ಹೇಳಿದ್ದಾರೆ ಎಂದರು.

Latest article