Wednesday, June 29, 2022

ಅಗ್ನಿಪಥ್​ ಖಂಡಿಸಿ ಬೃಹತ್​ ಹೋರಾಟಕ್ಕೆ ಕಾಂಗ್ರೆಸ್​ ಸಜ್ಜು: ರಾಜ್ಯ ನಾಯಕರಿಗೆ ಹೈ ಕಮಾಂಡ್​​ ಬುಲಾವ್​

Must read

ಬೆಂಗಳೂರು: ರಾಜ್ಯ ಕಾಂಗ್ರೆಸ್​ ನಾಯಕರಿಗೆ ದೆಹಲಿಗೆ ಬರುವಂತೆ ಹೈ ಕಮಾಂಡ್​ ಬುಲಾವ್​ ನೀಡಿದೆ.

ಕೇಂದ್ರದ ಅಗ್ನಿಪಥ್​ ಯೋಜನೆ ಖಂಡಿಸಿ ಕಾಂಗ್ರೆಸ್​ ಬೃಹತ್​ ಹೋರಾಟಕ್ಕೆ ಸಜ್ಜಾಗುತ್ತಿದ್ದು, ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲು ಕಾಂಗ್ರೆಸ್​ ಹೈ ಕಮಾಂಡ್​ ಸಭೆ ಆಯೋಜಿಸಿದೆ. ದೆಹಲಿಯಲ್ಲಿ ಸಭೆ ಕರೆದಿರುವ ಹೈ ಕಮಾಂಡ್ ನಾಳೆ ಜಂತರ್ ಮಂಥರ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ‌ ಭಾಗಿಯಾಗುವಂತೆ ಎಲ್ಲಾ ಶಾಸಕರಿಗೆ ಹಾಗೂ ಎಮ್​​ಎಲ್​​ಸಿಗಳಿಗೆ ದೆಹಲಿಗೆ ಬರುವಂತೆ ವೇಣುಗೋಪಾಲ್ ಕರೆ ಮೂಲಕ ತಿಳಿಸಿದ್ದಾರೆ.

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲು ಕೆಲವು ಶಾಸಕರು ನಿರ್ಧರಿಸಿದ್ದಾರೆ.

Latest article