Tuesday, August 16, 2022

ವೇದಿಕೆ ಮೇಲೆ ಡಿ.ಕೆ ಸುರೇಶ್​-ಅಶ್ವಥ್ ನಾರಾಯಣ್ ಕಿತ್ತಾಟ: ಇದು ಕರ್ನಾಟಕದ ಸಂಸ್ಕೃತಿ ಅಲ್ಲ ಎಂದ ಸಿಎಂ

Must read

ಕಲಬುರಗಿ: ವೇದಿಕೆ ಮೇಲೆ ಸಂಸದ ಡಿ.ಕೆ ಸುರೇಶ್​ ಹಾಗೂ ಸಚಿವ ಅಶ್ವಥ್ ನಾರಾಯಣ್ ಅವರ ಗಲಾಟೆ ವಿಚಾರವಾಗಿ ಸಿಎಂ ಬಸವರಾಜ್​ ಬೊಮ್ಮಾಯಿ ಪ್ರತಿಕ್ರಯಿಸಿದ್ದು, ಇದು ಕರ್ನಾಟಕದ ಸಂಸ್ಕೃತಿ ಅಲ್ಲಾ. ಮಾತಿನಿಂದ ತಮ್ಮ ವಿಚಾರ ಹೇಳಬಹುದು. ಆದ್ರೆ ಈ ರೀತಿ ವರ್ತನೆ ಸರಿಯಲ್ಲಾ ಎಂದಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಾಯಂಕಾಲ ಕೋವಿಡ್ ಬಗ್ಗೆ ಸಭೆ ಮಾಡ್ತಿದ್ದೇವೆ. ಟಾಸ್ಕಪೋರ್ಸ್ ಕಮಿಟಿ ಸದಸ್ಯರು ಇರುತ್ತಾರೆ. ಕೊರೊನಾ ಮತ್ತೆ ಹೆಚ್ಚಳ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ ಅನೇಕ ಮಾರ್ಗದರ್ಶನ ನೀಡಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಸೋಂಕು ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ‌ ವಹಿಸಬೇಕಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಮತ್ತು ಓಮಿಕ್ರಾನ್ ಹೆಚ್ಚಾಗುತ್ತಿದೆ. ಬರುವ ದಿನದಲ್ಲಿ‌ ಸುದೀರ್ಘ ಕ್ರಮ ಕೈಗೊಳ್ಳಬೇಕಾಗಿದೆ. ಔಷದಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲೆ ರಜೆ ಬಗ್ಗೆ ತಜ್ಞರು ಏನು ಹೇಳುತ್ತಾರೋ ಕೇಳಿ ತೀರ್ಮಾನ ಮಾಡುತ್ತೇವೆ. ಲಾಕ್​​ಡೌನ್, ಸೆಮಿ ಲಾಕ್​ಡೌನ್ ಬಗ್ಗೆ ತಜ್ಞರ ಮೀಟಿಂಗ್ ನಂತರ ನಿರ್ಧಾರ ಮಾಡುತ್ತೇವೆ ಎಂದರು.

ಇನ್ನು ಸರ್ಕಾರ ತೀರ್ಮಾನಕ್ಕೆ ಜನರು ಸಹಕಾರ ಕೂಡಾ ಅಗತ್ಯವಿದೆ. ಜನರು ಸಹಕಾರ ನೀಡಿದರೆ ಕೋವಿಡ್​ ನಿಯಂತ್ರಣ ಮಾಡಬಹುದು. ಗಡಿಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವದು ಎಂದರು.

Latest article