Thursday, January 27, 2022

ಶಾಸಕ ಸುಭಾಷ್ ಆರ್ ಗುತ್ತೇದಾರ ವಿರುದ್ಧ ಅವಹೇಳನ: BJP ಬೃಹತ್​ ಪ್ರತಿಭಟನೆ

Must read

ಕಲಬುರಗಿ: ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಗ್ಗೆ ಕಿಡಿಗೇಡಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಶಾಸಕರ ಅಭಿಮಾನಿಗಳು, ಮಠಾಧೀಶರು ಹಾಗೂ ಹಿಂದೂ ಪರ ಸಂಘಟನೆಗಳು ಆಳಂದ ಪಟ್ಟಣದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.

ಕಿಡಿಗೇಡಿಗಳು ಸುಭಾಷ್ ಆರ್ ಗುತ್ತೇದಾರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೇ ಆಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನು ಖಂಡಿಸಿ ಬೃಹತ್​ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರು ಬಸ್ ನಿಲ್ದಾಣದ ಮುಂದೆ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿದ್ದಾರೆ. ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಚೇರಿ ವರೆಗೆ ಮೆರೆವಣಿಗೆ ಸಾಗಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದಲಿಂಗ ಆಂದೋಲ ಶ್ರೀಗಳು ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಇರುವ ಶಿವಲಿಂಗಕ್ಕೆ ಈ ಹಿಂದೆ ಕಿಡೇಡಿಗಳು ಅವಮಾನ ಮಾಡಿದ್ದರು ಇದರ ಬಗ್ಗೆ ತಪ್ಪಿತಸ್ಥ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸುಭಾಷ್ ಗುತ್ತೇದಾರ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು ಇದನ್ನು ಸಹಿಸದ ಕಿಡಿಗೇಡಿಗಳು ಅವರನ್ನು ವೈಯಕ್ತಿಕವಾಗಿ ನಿಂದಿಸಿ ಅಡಿಯೋ ವೈರಲ್​​ ಮಾಡಿದ್ದಾರೆ. ಇದು ಖಂಡನೀಯ ಹಿಂದೂ ಧಾರ್ಮಿಕತಗೆ ಅದನ್ನು ಬೆಂಬಲಿಸುವವರ ಮೇಲೆ ಕೆಲವು ಮತಾಂದರು ಇಂತಹ ನೀಚ ಕೃತ್ಯ ಮಾಡುತ್ತಿದ್ದಾರೆ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಖಜೂರಿ ಮುರಘೇಂದ್ರ ಶ್ರೀ ನಂದಗಾಂವ ರಾಜಶೇಖರ ಶ್ರೀಯಳಸಂಗಿ ಪರಮಾನಂದ ಶ್ರೀ ಕಡಗಂಚಿ ವೀರಭದ್ರ ಶ್ರೀ ಆಳಂದ ಸಿದ್ದೇಶ್ವರ ಶ್ರೀ ಮಾಡ್ಯಾಳ ಒಪ್ಪತ್ತೇಶ್ವರ ಶ್ರೀ ದೇವಂತಗಿ ಶರಣ ಬಸವಶ್ರೀ ಭಾಗಿಯಾಗಿದ್ದರು.

Latest article