Tuesday, August 16, 2022

ಬಿಜೆಪಿಯವರೇ ಎಸ್​ಡಿಪಿಐ & ಪಿಎಫ್​ಐ ಸಂಘಟನೆಗಳನ್ನು ಸಾಕಿದ್ದಾರೆ-ಸಿದ್ದರಾಮಯ್ಯ

Must read

ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಸಂಪೂರ್ಣವಾಗಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಅಂದರೆ ಸಿಎಂ ವಿಫಲವಾಗಿದ್ದಾರೆ ಅಂತಾ ಅರ್ಥ. ಅವರಿಗೆ ಮೂರು ಜನರ ಪ್ರಾಣ ಉಳಿಸೋದಕ್ಕೆ ಸಾಧ್ಯವಾಗಲಿಲ್ಲ. ಇದರ ಜವಾಬ್ದಾರಿಯ ಹೊಣೆ ಸಿಎಂ ಹಾಗೂ ಗೃಹ ಸಚಿವರೇ ಹೊರಬೇಕು. ಸರ್ಕಾರ ವಿಫಲವಾಗಿದೆ ಎಂದು ನಾವು ಹೇಳೋದಲ್ಲ. ಅವರ ಪಕ್ಷದವರೇ ಹೇಳುತ್ತಿದ್ದಾರೆ, ಸಂಘ ಪರಿವಾರದವರೇ ಹೇಳುತ್ತಿದ್ದಾರೆ ಎಂದರು.

ಇನ್ನು ನಿಮಗೆ ರಕ್ಷಣೆ ನೀಡಲು ಆಗಲ್ಲ ಎಂದರೆ ರಾಜೀನಾಮೆ ಕೊಡಿ. ಬಿಜೆಪಿ ಅಧಿಕಾರದಲ್ಲಿದ್ದರೆ ಯಾರಿಗೂ ರಕ್ಷಣೆ ಇಲ್ಲ. ಪ್ರಕರಣಗಳ ಹಿಂದೆ ಎಸ್​ಡಿಪಿಐ ಪಿಎಫ್​ಐ ಪ್ರಚೋದನೆ ಕುರಿತು ಸಾಕ್ಷಿ ಇದ್ದರೆ ಅವರನ್ನು ಬ್ಯಾನ್ ಮಾಡಲಿ. ಬಿಜೆಪಿಯವರೇ ಆ ಸಂಘಟನೆಗಳನ್ನು ಸಾಕಿದ್ದಾರೆ ಎಂದು ಆರೋಪಿಸಿದರು.

ದಕ್ಷಿಣ ಕನ್ನಡದಲ್ಲಿ ನಡೆದಲ್ಲಿ ಹತ್ಯೆಯಾದ ಕೆಲ ಯುವಕರ ಮನೆಗೆ ಸಿಎಂ‌ ಭೇಟಿ ನೀಡದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಕೇವಲ ಒಂದು ವರ್ಗದ ಮುಖ್ಯಮಂತ್ರಿಯಾಗಿದ್ದಾರೆ. ಕೇವಲ ಒಂದು ವರ್ಗದ ಮನೆಗೆ ಸಿಎಂ ಭೇಟಿ ನೀಡುವುದು ಎಷ್ಟರ ಮಟ್ಟಿಗೆ ಸರಿ. ನಾನು ಸಿಎಂ ಇದ್ದಾಗ ಎಲ್ಲ ವರ್ಗದ ಮನೆಗಳಿಗೂ ಭೇಟಿ ನೀಡಿದ್ದೇನೆ. ಪರಿಹಾರ ನೀಡುವುದರಲ್ಲೂ ಸಿಎಂ ತಾರತಮ್ಯ ಮಾಡುತ್ತಿದ್ದಾರೆ. ಇದನ್ನು ರಾಜಧರ್ಮ ಎನ್ನಲಾಗುತ್ತದೆಯಾ..? ರಾಜಧರ್ಮ ಅಂದ್ರೆ ಇದೇನಾ ಎಂದು ಪ್ರಶ್ನಿಸಿದ್ದಾರೆ.

Latest article