Tuesday, May 17, 2022

ಯೂತ್ ಕಾಂಗ್ರೆಸ್​ಗೆ ಬುದ್ಧಿ ಹೇಳಿದ್ರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತೆ‌: ನಲಪಾಡ್​ಗೆ ಎಂಎಲ್​ಸಿ ರಾಜೇಂದ್ರ ಟಾಂಗ್​​

Must read

ತುಮಕೂರು: ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದರೂ ಸಂಘಟನೆಗೆ ಬರಬಹುದು. ಯಾರೋ ಒಬ್ಬರನ್ನು ಓಲೈಕೆ ಮಾಡೋದು ತಪ್ಪು. ಅಧ್ಯಕ್ಷರಾಗೋಕೆ ಯಾರಾದರೊಬ್ಬರ ಸಪೋರ್ಟ್ ಇರುತ್ತೆ, ಅವರನ್ನೇ ಓಲೈಸಿದ್ರೆ ಪಕ್ಷ ಸಂಘಟನೆಯಾಗಲ್ಲ ಎಂದು ನಲಪಾಡ್​ಗೆ ಎಂಎಲ್​ಸಿ ರಾಜೇಂದ್ರ ಟಾಂಗ್​​ ನೀಡಿದ್ದಾರೆ.

ರಮ್ಯಾ-ನಲಪಾಡ್ ಟ್ವೀಟ್ ವಾರ್​ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯದಲ್ಲಿ ಎಲ್ಲರ ವಿಶ್ವಾಸದಲ್ಲಿ ಎಲ್ಲರು ಇರೋದು ಸಹಜ. ನಮ್ಮ ಪಕ್ಷದ ಯುವ ಕಾಂಗ್ರೆಸ್ ಅಧ್ಯಕ್ಷರು ಉಡುಪಿಯಲ್ಲಿ ರಮ್ಯಾ ಬಗ್ಗೆ ಮಾತನಾಡಿದ್ದಾರೆ. ನಾನು ಕೂಡ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ, ರಾಜ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ನಮಗೆ ಜವಾಬ್ದಾರಿ ಕೊಟ್ಟಿರುತ್ತಾರೆ. ರಾಜ್ಯ, ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡೋದು ಇರೋದಿಲ್ಲ. ನಲಪಾಡ್ ಮಾತನಾಡಿರೋದು ಪಕ್ಷಕ್ಕೆ ಗೌರವ ತರುವಂತಹದಲ್ಲ.

ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು. ಯಾರನ್ನೋ ಒಬ್ರನ್ನ ಓಲೈಕೆ ಮಾಡೋದು ತಪ್ಪು. ಅಧ್ಯಕ್ಷರಾಗೋಕೆ ಯಾರಾದರೊಬ್ಬರ ಸಪೋರ್ಟ್ ಇರುತ್ತೆ, ಅವರನ್ನೇ ಓಲೈಸಿದ್ರೆ ಪಕ್ಷ ಸಂಘಟನೆಯಾಗಲ್ಲ. ಯೂತ್ ಕಾಂಗ್ರೆಸ್​ಗೆ ಬುದ್ಧಿ ಹೇಳಿದ್ರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತೆ‌. ನಮ್ಮ ಹಿನ್ನೆಲೆಯನ್ನೂ ನಾವು ನೋಡಿಕೊಳ್ಳಬೇಕು, ನಾವೇನು ಸಾಚಾಗಳಲ್ಲಾ. ಹಿಂದೆ ನೀವು ಏನೇನ್ ಮಾಡಿದ್ರಿ ಅನ್ನೋದು ರಾಜ್ಯ, ರಾಷ್ಟ್ರದ ಜನರು ನೋಡಿದ್ದಾರೆ. ಮಾತಾನಾಡೋ ಸಂದರ್ಭದಲ್ಲಿ ಇತಿ ಮಿತಿಯಾಗಿರಬೇಕು ಅಂತ ನಲಪಾಡ್​ಗೆ ಹೇಳ್ತೇನೆ.

ಸುರ್ಜೇವಾಲಾ ಮಧ್ಯಸ್ಥಿಕೆಯಲ್ಲಿ ಮಾತನಾಡಿ ಇತ್ಯರ್ಥ ಮಾಡಲಿ. ಸ್ವಲ್ಪ ಅಧಿಕಾರ ಸಿಕ್ತಿದ್ದಾಗೆ ಪ್ರಚಾರ ಪ್ರಿಯರು ಆಗ್ತಾರೆ. ಆ ಜೋಶ್​ನಲ್ಲಿ ಹುಡುಗ ಸ್ವಲ್ಪ ಮಾತನಾಡಿದ್ದಾನೆ ಅಂದ್ಕೊಂಡಿದ್ದೀನಿ. ಮುಂದೆ ಮಾತನಾಡಬಾರದು ಅಂತ ಅವರಿಗೆ ಹೇಳ್ತೀನಿ. ಇದು ಹದ್ದು ಮೀರಿದ ವರ್ತನೆಯಂತೆ ಇರುವ ಸ್ಥಾನಕ್ಕಿಂತ ಹೆಚ್ಚು ಮಾತನಾಡಿದ್ರು.
ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಇಬ್ಬರು ಚೆನ್ನಾಗಿದ್ದಾರೆ, ಇವ್ರೆಲ್ಲಾ ಯಾಕ್ ಮಾತನಾಡಬೇಕು ಎಂದರು.

 

 

Latest article