Friday, January 21, 2022

ಪಾದಯಾತ್ರೆ ನಿಲ್ತಲ್ಲಾ, ಇನ್ಮುಂದೆ ಕೋವಿಡ್ ಕಡಿಮೆಯಾಗುತ್ತೆ ಅನ್ನೋ ನಂಬಿಕೆ: ಕೆ.ಎಸ್​.ಈಶ್ವರಪ್ಪ

Must read

ಶಿವಮೊಗ್ಗ: ಕಾಂಗ್ರೆಸ್ ಪಾದಯಾತ್ರೆ ನಿಲ್ತಲ್ಲಾ, ಇನ್ಮುಂದೆ ಕೋವಿಡ್ ಕಡಿಮೆಯಾಗುತ್ತೆ ಅನ್ನೋ ನಂಬಿಕೆ ನನಗೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಮಾಡುವಾಗ ಮಕ್ಕಳ ಹತ್ರ ಹೋಗಿ ಪೋಸ್ ಕೊಡ್ತಾರೆ. ಇದಕ್ಕೆಲ್ಲಾ ಕಾರಣ ಡಿ.ಕೆ.ಶಿವಕುಮಾರ್. ಇವರ ರಾಜಕಾರಣಕ್ಕಾಗಿ ರಾಜ್ಯದ ಜನರಿಗೆ ತೊಂದರೆ ಕೊಟ್ಟರು. ಡಿ.ಕೆ.ಶಿವಕುಮಾರ್ ಹಠಕ್ಕೆ ಖರ್ಗೆ, ರೇವಣ್ಣ ಎಲ್ಲಾ ನಾಯಕರು ಬರಬೇಕಾಯಿತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಚೆನ್ನಾಗಿ ಇದ್ದಾರೆ ಎಂದು ಕೆಲವರು ಪಾದಯಾತ್ರೆಗೆ ಬಂದ್ರು. ವಿಧಿಯಿಲ್ಲದೇ ಪಾದಯಾತ್ರೆಗೆ ಬಂದು ಕೋವಿಡ್ ಅಂಟಿಸಿಕೊಂಡು ಹೋದರು. ಮೇಕೆದಾಟು ಯೋಜನೆ ಕಾಂಗ್ರೆಸ್​ಗೆ ರಾಜಕೀಯ ಕುತಂತ್ರ ಎಂದರು.

ಇದು ಮುಖ್ಯಮಂತ್ರಿಯಾಗುವ ರೇಸ್ ಅಲ್ಲ, ಅದು ಸಿಎಂ ಆಗುವ ಕನಸಿಗೆ ಭಗ್ನ. ಇಬ್ಬರೂ ಸಿಎಂ ಕನಸು ಕಾಣುತ್ತಿದ್ದರು. ಕನಸಲ್ಲಿ ಸಿಎಂ ಕುರ್ಚಿ ಮೇಲೆ ಇಬ್ಬರು ಇದ್ದರು. ಕೋರ್ಟ್ ತಲೆ ಮೇಲೆ ಹೊಡೆದು, ಇಬ್ಬರನ್ನು ಎಬ್ಬಿಸಿದೆ. ನೀವು ಸಿಎಂ ಕನಸು ಕಾಣಬೇಡಿ ಎಂದು ಕೋರ್ಟ್ ಉತ್ತರ ಕೊಟ್ಟು ಮಲಗಿಸಿದೆ ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

 

Latest article