Tuesday, August 16, 2022

ಇವರು ಮರ್ಯಾದಸ್ಥರು ಹೌದೋ, ಅಲ್ವೋ ಅವರೇ ತಿರ್ಮಾನ ಮಾಡಲಿ: ಕೈ ನಾಯಕರ ವಿರುದ್ಧ ಈಶ್ವರಪ್ಪ ಕಿಡಿ

Must read

ಶಿವಮೊಗ್ಗ: ಮರ್ಯಾದಸ್ಥರಿಗೆ ಗೌರವದಿಂದ 30 ಮತ್ತು ಅದರ್ಸ್ ಅಂತಾ ಹಾಕಿರುತ್ತಾರೆ. ಇವರು ಮರ್ಯಾದಸ್ಥರು ಹೌದೋ, ಅಲ್ವೋ ಅವರೇ ತಿರ್ಮಾನ ಮಾಡಲಿ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಸಚಿವ ಕೆ.ಎಸ್​.ಈಶ್ವರಪ್ಪ ಕಿಡಿಕಾರಿದ್ದಾರೆ.

ಪಾದಯಾತ್ರೆಯಲ್ಲಿ ಭಾಗವಹಿಸಿದ 30 ಜನರ ವಿರುದ್ಧ ಎಫ್​ಐಆರ್ ದಾಖಲಿಸಿದ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಕೇಸ್ ಹಾಕೋದು ಬಹಳ ದೊಡ್ಡ ಕೆಲಸವಲ್ಲ. ಕೋವಿಡ್ ಸಂದರ್ಭದಲ್ಲಿ ನಿಮ್ಮಂತಹ ನಾಯಕರ ಮೇಲೆ ಕೇಸ್ ಹಾಕುವ ಸ್ಥಿತಿ ಬಂದಿದ್ದು ನೋವಿನ ವಿಚಾರ. 30 ಜನರ ಮೇಲೆ ಕೇಸ್ ಹಾಕಿದ್ದು ನನಗೆ ತೃಪ್ತಿಯಿಲ್ಲ. ಆ ಉದ್ದೇಶ ನಮ್ಮದ್ದಲ್ಲ. ಅವರ ಭಂಡತನಕ್ಕೆ ಇನ್ನು ಎನು ಮಾಡೋದು, ಬೇರೆ ದಾರಿ ಇಲ್ಲ. ಮುಖ್ಯಮಂತ್ರಿಯಾದವರ ಮೇಲೆ, ಕೇಂದ್ರದ ವಿಪಕ್ಷ ನಾಯಕರಾದವರ ಮೇಲೆ ಕೇಸ್​ ಹಾಕುತ್ತೇವೆ ಅಂದರೆ ಜನರಿಗೆ ಇವರು ಏನು ಬುದ್ದಿವಾದ ಹೇಳ್ತಾರೆ. ಕಾನೂನು ಉಲ್ಲಂಘನೆ ಮಾಡಿ ಎಂದು ಇವರೇ ಹೇಳಿದ ಹಾಗಾಯ್ತು.

ಕೋವಿಡ್ ಹೋದ ಮೇಲೆ ಮೇಕೆದಾಟುವಿನಲ್ಲೇ ಬಿದ್ದು ಒದ್ದಾಡಲಿ. ನಾನೇನು ಬೇಡ ಅನ್ನಲ್ಲ. ಆದರೆ, ಈಗ ಮಾಡಿದರೆ ಅರ್ಥ ಉಂಟಾ? ಶಾಲಾ ಮಕ್ಕಳ ಮಧ್ಯೆ ನಿಂತುಕೊಂಡು ಡಿ.ಕೆ.ಶಿವಕುಮಾರ್ ಪೋಸ್ ಕೊಡ್ತಾ ಇದ್ದಾರೆ. ಅವರು ಇಂಟರ್ ನ್ಯಾಶನಲ್ ಹೀರೋ. ನಾಚಿಕೆಯಾಗಬೇಕು ಇವರಿಗೆ, ಪ್ರಜಾ ಪ್ರಭುತ್ವಕ್ಕೆ ಅಪಮಾನ ಮಾಡ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಪ್ರಯತ್ನ ಮಾಡುತ್ತಿದೆ. ಕೋರ್ಟ್ ಸಮಸ್ಯೆ ಬಗೆಹರಿಸಿಕೊಂಡು ಯೋಜನೆ ಜಾರಿಗೆ ತರುತ್ತೇವೆ.

ನಿಮ್ಮ ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿ ಗ್ರಾಮಕ್ಕೆ ವಾಪಸ್ ಬರುತ್ತಿದ್ದಾರೆ. ಮೆರವಣಿಗೆ ಬಂದು ಗ್ರಾಮಕ್ಕೆ ಹೋಗಿ ಕೋವಿಡ್ ಹರಡುವ ಕೆಲಸ ಮಾಡಿದ್ರೆ ಹೇಗೆ..? ಇವರ ರಾಜಕೀಯ ತೆವಲು ತೀರಿಸೋಕೆ ರಾಜ್ಯದ ಜನರು ಅನುಭವಿಸಬೇಕಾ? ದಯಮಾಡಿ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ. ಆಮೇಲೆ ಒಟ್ಟಿಗೆ ಕೂತು ಮಾತುಕತೆ ನಡೆಸೋಣ. ಬಗೆಹರಿದ್ರೆ ಸಂತೋಷ. ಇಲ್ಲವಾದರೆ ಹೋರಾಟ ಮಾಡಿ, ಅವಕಾಶವಿದೆ ಎಂದರು.

Latest article