Friday, January 21, 2022

ಬುಟ್ಟಿಯಲ್ಲಿನ ಹಾವನ್ನು ಇನ್ನೂ ನಾನು ತೋರಿಸಿಲ್ಲ-ಗೋವಿಂದ್ ಕಾರಜೋಳ

Must read

ಬೆಳಗಾವಿ: ಕಾವೇರಿಯಿಂದ ಭೀಮಾ ನದಿವರೆಗೂ ಕಾಂಗ್ರೆಸ್​​ನವರು ಮೈಮೇಲೆ ದೆವ್ವ ಬಂದಂಗೆ ಕುಣಿದಾಡುತ್ತಿದ್ದಾರೆ. ನನ್ನ ಬುಟ್ಟಿಯಲ್ಲಿ ಹಾವು ಇದೆ ಅಂತಾ ನಾನು ಹೇಳಿದ್ದೇನೆ. ಬುಟ್ಟಿಯಲ್ಲಿನ ಹಾವನ್ನು ಇನ್ನೂ ನಾನು ತೋರಿಸಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್​ನ ಕೆಲ ಪುಡಿ ರಾಜಕಾರಣಿಗಳ ನಾಲಿಗೆಗೆ ಸಂಸ್ಕಾರ ಇಲ್ಲ. ನನ್ನ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಉಳಿದವರ ಬಗ್ಗೆ ನಾನು ಹಗುರವಾಗಿ ಮಾತನಾಡುವ ವ್ಯಕ್ತಿಯಲ್ಲ. ನಾನೆಂದು ಅವಾಚ್ ಶಬ್ದ ನನ್ನ ರಾಜಕಾರಣದಲ್ಲಿ ಬಳಸಿಲ್ಲ. ಹೊಣಗೇಡಿತನದಿಂದ ನನ್ನ ಬಗ್ಗೆ ಮಾತನಾಡಬೇಡಿ . ಸ್ಫೋಟ ಮಾಹಿತಿ ನಾನು ಬಹಿರಂಗ ಮಾಡ್ತಿನಿ. ಆದ್ರೆ ಈಗ ಸುಪ್ರೀಂ ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದೆ. ಸ್ವಲ್ಪ ಕಾಯೋಣಾ ಎಂದಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಬಿಜೆಪಿಯವರು ಬುದ್ಧಿ ಹೇಳಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನೀವು ಡಿಎಂಕೆದವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಿ ಮಾಡುತ್ತಿದ್ದೀರಿ. ನೀವು ಸರ್ಕಾರ ನಡೆಸುವವರಿಗೆ ಬುದ್ಧಿ ಹೇಳಿ. ಊರ ಒಳಗೆ ಕುಳಿತು ಅಧಿಕಾರ ಮಾಡ್ತಿರುವ ನಿಮ್ಮವರಿಗೆ ಬುದ್ಧಿ ಹೇಳಿ. ಅಣ್ಣಾಮಲೈ ಅಧಿಕಾರದಿಂದ ಹೊರಗಿದ್ದಾರೆ, ಎಐಡಿಎಂ ನೆರಳಲ್ಲಿ ನೀವು ಆಡಳಿತ ಮಾಡ್ತಿದ್ದೀರಿ. ಯೋಜನೆ ಕುರಿತು ಮೊದಲು ಅವರಿಗೆ ತಿಳಿ ಹೇಳುವ ಕೆಲಸ ಮಾಡಿ ಎಂದಿದ್ದಾರೆ.

Latest article