Sunday, October 2, 2022

ಗೋವಾ ‘ಕೈ’ ಖಾಲಿ ಖಾಲಿ..!

Must read

ಗೋವಾದ ಕಾಂಗ್ರೆಸ್​ನಲ್ಲಿ ಸದ್ಯ ತಳಮಳ ಉಂಟಾಗಿದೆ. ಕಾಂಗ್ರೆಸ್​ ಚೋಡೋ, ಭಾಜಪ ಜೋಡೋ ಎಂದು ಕಾಂಗ್ರೆಸ್​ ನಾಯಕರು ಘೋಷಣೆ ಮೊಳಗಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಗೋವಾ ಸಿಎಂ ಉಪಸ್ಥಿತಿಯಲ್ಲಿ ಕಾಂಗ್ರೆಸ್​ನ 8 ಶಾಸಕರು ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಶಾಸಕರಿಗೆ ಕೇಸರಿ ಬಾವುಟ ನೀಡುವ ಮೂಲಕ ಸ್ವಾಗತ ಕೋರಲಾಗಿದೆ.
ಶಾಸಕರಾದ ಮೈಕಲ್​ ಲೋಬೋ, ಮಾಜಿ ಸಿಎಂ ದಿಗಂಬರ್​ ಕಾಮತ್​, ದಿಲಿಹಾ ಲೋಬೋ, ರಾಝೇಶ್​ ಪಾಲ್​ದೇಸಾಯಿ, ಕೇದಾರ್​ ನಾಯಕ್​, ಸಂಕಲ್ಪ ಅಮೋಂಕರ್​, ಅಲೆಕ್ಸೋ ಸಿಕ್ವೇರಾ, ರುಡಾಲ್ಫ್​ ಫರ್ನಾಂಡೀಸ್​ ಬಿಜೆಪಿಗೆ ಸೇರಿದ್ದಾರೆ. ಈ ಮೂಲಕ ಗೋವಾ ಕಾಂಗ್ರೆಸ್​ನಲ್ಲಿ ಕೇವಲ ಮೂವರೇ ಮೂವರು ಕಾಂಗ್ರೆಸ್​ ಶಾಸಕರು ಉಳಿದುಕೊಂಡಂತಾಗಿದೆ.

Latest article