Monday, January 24, 2022

ಕೋವಿಡ್ ಜಾಸ್ತಿ ಆಗ್ತಿದೆ..ಮಹತ್ವದ ನಿರ್ಧಾರ ತಗೆದುಕೊಳ್ಳುತ್ತೇವೆ-ಸಿಎಂ ಬೊಮ್ಮಾಯಿ

Must read

ಬೆಂಗಳೂರು: ಇಡೀ ದೇಶದಲ್ಲಿ ಕೋವಿಡ್ ಜಾಸ್ತಿ ಆಗ್ತಿದೆ. ಬರುವ ದಿನಗಳಲ್ಲಿ ಕೇಸ್​ಗಳು ಯಾವ ರೀತಿ‌ ಆಗ್ತಿವೆ ನೋಡಿಕೊಂಡು ಕ್ರಮಗಳನ್ನು ಕೈಗೊಳ್ತೇವೆ ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔಷಧಿಗಳು, ಆರೋಗ್ಯ ವ್ಯವಸ್ಥೆ, ಬೆಡ್ ಗಳು, ಐಸಿಯುಗಳ ಸಿದ್ಧತೆಗೆ ಬರುವ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಇನ್ನು ಇಂದು  ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದೇನೆ. ಜಿಲ್ಲಾ ಮಟ್ಟದ ಹಲವು ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.  ಯೋಜನೆಗಳ ಅನುಷ್ಠಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತೇನೆ. ಬರುವ ದಿನಗಳಲ್ಲಿ ಮಹತ್ವದ ತೀರ್ಮಾನ ಮಾಡುತ್ತೇವೆ. ಹೊಸ ವರ್ಷದಲ್ಲಿ ಹೊಸ ದಿಕ್ಸೂಚಿ ಅಡಿಯಲ್ಲಿ ಇನ್ನಷ್ಟು ಜನರೆಡೆಗೆ ಆಡಳಿತ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದರು.

Latest article