ಯಾದಗಿರಿ: ಸಿದ್ದರಾಮಯ್ಯನ ಕಾಲದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇಂದು ಪ್ರಿಯಾಂಕ್ ಖರ್ಗೆಯವರು ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಪ್ರಿಯಾಂಕ್ ಖರ್ಗೆ ಕಲ್ಲು ಹೊಡೆದು ಓಡಿ ಹೋಗ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯಂತೆ ಪ್ರಿಯಾಂಕ್ ಖರ್ಗೆ ಅವರನ್ನ ಮನೆಗೆ ಕಳುಹಿಸಬೇಕು. ಪಿಎಸ್ಐ ಹಗರಣ ಬಗ್ಗೆ ಮಾತಾಡ್ತಾರೆ, ಆದ್ರೆ ದಾಖಲೆ ಕೊಡದೆ ಓಡ್ತಾರೆ. ಪೊಲೀಸರ ಎದುರು ಬರೋಕೆ ಧಮ್ ಇಲ್ಲ. ಪಿಎಸ್ಐ ಹಗರಣದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಪಿಎಸ್ಐ ಹಗರಣ ಕೂಡಲೇ ಸಿಐಡಿಗೆ ವಹಿಸಲಾಗಿದೆ.
ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಹಗರಣ ನಡೆದಿದೆ. ಸಾಕಷ್ಟು ನೇಮಕಾತಿಗಳಲ್ಲಿ ಹಗರಣ ನಡೆದಿತ್ತು. ಹಲವು ಹಗರಣಗಳು ಸಿದ್ದರಾಮಯ್ಯನಿಗೆ ಮರೆತು ಹೋಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ನಿಮ್ಮ ರಾಜ್ಯದ ಅಧ್ಯಕ್ಷರು ಯಾಕೆ ಜೈಲಿಗೆ ಹೋದ್ರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಾಕೆ ಬೇಲ್ ಮೇಲೆ ಇದ್ದಾರೆ..? ಕಾಂಗ್ರೆಸ್ನ ಕೇಂದ್ರದಿಂದ ರಾಜ್ಯದ ವರೆಗಿನ ನಾಯಕರು ಬೇಲ್ನಲ್ಲಿ ಇದ್ದಾರೆ.
ಭ್ರಷ್ಟಾಚಾರದಿಂದಲೇ ನೀವೆಲ್ಲ ಬಂದವರು, ನಾಚಿಕೆ ಆಗಬೇಕು ನಿಮಗೆ. ತಿಹಾರ್ ಜೈಲಿಗೆ ಹೋದಾಗ ಮೆರವಣಿಗೆ, ಬಂದಾಗ ಮೆರವಣಿಗೆ ಏನ್ರೀ ಇದು ನಾಟಕ. ಇವರೆಲ್ಲ ಸಾಧಕರಾ..? ಭ್ರಷ್ಟಾಚಾರದ ಇನ್ನೊಂದು ಹೆಸರು ಸಿದ್ದರಾಮಯ್ಯನ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.