Tuesday, October 26, 2021

BJP ಡಬಲ್ ಹೈಕಮಾಂಡ್ ಸರ್ಕಾರ-ಕಾಂಗ್ರೆಸ್​ ವ್ಯಂಗ್ಯ

Must read

ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಇದು ಡಬಲ್ ಎಂಜಿನ್ ಸರ್ಕಾರವಲ್ಲ, ಡಬಲ್ ಹೈಕಮಾಂಡ್ ಸರ್ಕಾರ ಎಂದು ವ್ಯಂಗ್ಯ ಮಾಡಿದೆ.

ದೆಹಲಿಯಲ್ಲಿ ಒಂದು ಹೈಕಮಾಂಡ್ ಇದೆ. ಮತ್ತೊಂದು ಹೈಕಮಾಂಡ್ ಧವಳಗಿರಿಯಲ್ಲಿದೆ. ಸಿಎಂ ಹೆಸರನ್ನ ಸೂಚಿಸುವುದಿಲ್ಲ ಎನ್ನುತ್ತಲೇ ದೆಹಲಿ ಹೈಕಮಾಂಡ್‌ನ್ನ ಮಣಿಸಿದ ಬಿ.ಎಸ್​ ಯಡಿಯೂರಪ್ಪನವರು ತಮಗೆ ಬೇಕಾದ ಸಂಪುಟ ರಚಿಸುತ್ತಾರೆ.

ಒಟ್ಟಿನಲ್ಲಿ ಬಿಜೆಪಿ ಹಾಗೂ ಬಿಜೆಪಿ ಕಿತ್ತಾಟ ನಿಲ್ಲದು, ಮುಂದೆ ಸ್ಥಿರ ಸರ್ಕಾರವೂ ಜನರಿಗೆ ಸಿಗದು ಎಂದು ಕಾಂಗ್ರೆಸ್​ ಟ್ವೀಟ್​ಮೂಲಕ ಲೇವಡಿ ಮಾಡಿದೆ.

More articles

Latest article