ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ನಡುವಿನ ಮಾರಿನ ಜಟಾಪಟಿ ಮುಂದುವರಿದಿದೆ. ಈ ಮಧ್ಯೆ ಸುಮಲತಾ ಅವರು ನೀಡಿರುವ ಹೇಳಿಕೆ ಸಂಬಂಧಿಸಿದಂತೆ ಪೋಟೋವೊಂದು ವೈರಲ್ ಆಗಿದೆ.ರೆಬಲ್ ಸ್ಟಾರ್ ಸ್ಟಾರ್ ಅಂಬರೀಶ್ ಮುಂದೆ ಕುಮಾರಸ್ವಾಮಿ ಕೈ ಕಟ್ಟಿದ್ರು ಎಂದು ಸುಮಲತಾ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ಪುಷ್ಠಿಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಸ್ಯಾಂಡಲ್ವುಡ್ ನಿರ್ದೇಶಕ ರಾಕ್ಲೈನ್ ವೆಂಕಟೇಶ್, ನಟ ದೇವರಾಜ್ ಅಂಬರೀಶ್ ಜೊತೆಗೆ ಕುಮಾರಸ್ವಾಮಿ ಸಹ ಇದ್ದಾರೆ.