Monday, March 27, 2023

ಸುಮಲತಾ-ಹೆಚ್ಡಿಕೆ ಸಮರದಲ್ಲಿ ಅಂಬಿ ಹೆಸರು ತರುವುದಲ್ಲ ಸರಿಯಲ್ಲ-BC ಪಾಟೀಲ್​​

Must read

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಜಟಾಪಟಿಯ ನಡುವೆ ಅಂಬರೀಶ್​ ಹೆಸರು ತರುವುದು ಸರಿಯಲ್ಲ ಎಂದು ಸಚಿವ ಬಿ.ಸಿ ಪಾಟೀಲ್​ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಬರೀಶ್​ ಅವರು ನಟನಾಗಿ, ರಾಜಾಕಾರಣಿಯಾದವರು. ಸಿನಿಮಾರಂಗದ ದಿಗ್ಗಜರಾಗಿದ್ದವರು. ಅಂತವರ ಹೆಸರನ್ನ ಇದಕ್ಕೆ ಬಳಸುವುದು ಸರಿಯಲ್ಲ. ದಿವಂಗತರ ಹೆಸರು ರಾಜಕಾರಣಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಇನ್ನು ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದು ತಪ್ಪು. ಒಬ್ಬ ಮಹಿಳೆ, ಸಂಸದೆಯ ಬಗ್ಗೆ ಹೇಳಿಕೆ ಸರಿಯಲ್ಲ ಎಂದಿದ್ದಾರೆ.

 ಮಂಡ್ಯದಲ್ಲಿ ಅಕ್ರಮ‌ಗಣಿಗಾರಿಕೆ ಇದ್ದರೆ ತನಿಖೆ ಮಾಡಲಿ. ತನಿಖೆ ಮಾಡಲು ಯಾವುದೇ ನಿರ್ಭಂಧವಿಲ್ಲ. ಇವತ್ತು ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ಕೊಟ್ಟಿದೆ. ಕೆಆರ್​ಎಸ್​ ಡ್ಯಾಂ ಎಲ್ಲೂ ಬಿರುಕು ಬಿಟ್ಟಿಲ್ಲವೆಂದು. ಕಾವೇರಿ ನಮ್ಮ ಕನ್ನಡ ನಾಡಿನ ಜೀವನಾಡಿ. ಬಿರುಕಿದ್ದರೆ ಮತ್ತೊಮ್ಮೆ ಪರಿಶೀಲನೆ ಮಾಡಲಿ ಎಂದು ಆಗ್ರಹಿಸಿದರು.

Latest article