Monday, November 29, 2021

ಸಿಎಂ ಬದಲಾವಣೆ ಕೊರೊನಾಗಿಂತಲೂ ದೊಡ್ಡ ಅನಾಹುತಾ: BSY ಪರ ಮಠಾಧೀಶರು

Must read

ಶಿವಮೊಗ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಠಾಧೀಶರು ಬಿ.ಎಸ್.ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು, ಜಿಲ್ಲೆಯ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಯಡಿಯೂರಪ್ಪ ಪರ ಮಾತನಾಡಿದ್ದಾರೆ.

ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆಯ ವಿಷಯವೇ ಬರಬಾರದು. ನಾಯಕತ್ವ ಬದಲಾವಣೆ ಎಂದರೆ ಕೊರೊನಾಗಿಂತಲೂ ದೊಡ್ಡ ಅನಾಹುತ ಸಂಭವಿಸುತ್ತದೆ. ಯಡಿಯೂರಪ್ಪ ಅವರ ನಾಯಕತ್ವಕ್ಕೆ ಅಡೆತಡೆ ತರುವ ಕೆಲಸವನ್ನು ಯಾರೂ ಮಾಡಬಾರದು. ಒಂದು ವೇಳೆ ಈ ಕೆಲಸ ಮಾಡಿದರೆ ಅದು ತಮ್ಮ ತಲೆ ಮೇಲೆ ತಾವೇ ಕಲ್ಲುಹಾಕಿಕೊಂಡಂತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಸಿಎಂ ಬಿಎಸ್​ವೈ ಇಂದು ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರಮಕ್ಕೆ ಭೇಟಿ ನೀಡಿದ್ದು, ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ. ಬಳಿಕ ಈ ವೇಳೆ ಮಲೆನಾಡು ಮಠಾಧೀಶರ ಪರಿಷತ್​ ಮುಖಂಡರು ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದು, ಈ ವೇಳೆ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ.

Latest article