ಬೆಂಗಳೂರು: ರಾಕ್ಲೈನ್ ವೆಂಕಟೇಶ್ ನೀವೇನು ಎಂಪಿನಾ, ಶಾಸಕರಾ, ಝಡ್ ಪಿ ಮೆಂಬರ್ ಆ, ನೀವು ಯಾವ ಸ್ಥಾನದಲ್ಲಿದ್ದೀರಾ..? ರಾಜಕೀಯ ಮಾಡುವವರು ಚುನಾವಣೆಗೆ ಬನ್ನಿ ಎಂದು ಜೆಡಿಎಸ್ ಮಾಜಿ ಎಂಎಲ್ಸಿ ಶರವಣ ನಿರ್ದೇಶಕ ರಾಕ್ಲೈನ್ ವೆಂಕಟೇಶ್ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಬಗ್ಗೆ ಮಾತನಾಡಲು ಹಿಡಿತ ಇರಬೇಕು. ಗಾಳಿಯಲ್ಲಿ ಗುಂಡು ಹಾರಿಸಿಹೋಗದಲ್ಲ. ನೀವು ಎಲ್ಲಿ ಬಡ್ಡಿ ಕೊಡ್ತೀರಾ, ತೆಗೆದುಕೊಳ್ತೀರ ಹೇಳಲ್ಲ. ರಾಜಕೀಯಕ್ಕೆ ಬನ್ನಿ, ವೇದಿಕೆ ರೆಡಿ ಮಾಡೋಣ. ಇದು ಇಲ್ಲಿಗೇ ಮುಕ್ತಾಯ ಮಾಡಿ. ಕುಮಾರಸ್ವಾಮಿಗೆ ಕ್ಷಮೆಯಾಚಿಸಿ. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ರಾಕ್ಲೈನ್ ವೆಂಕಟೇಶ್ಗೆ ಶರವಣ ಎಚ್ಚರಿಕೆ ನೀಡಿದ್ದಾರೆ.