ಬೆಂಗಳೂರು: ಜೆಡಿಎಸ್ನಲ್ಲಿ ಮುಂದಿನ ಭವಿಷ್ಯ ಪ್ರಜ್ವಲ್ ರೇವಣ್ಣ ಎಂಬ ಮಂಡ್ಯ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಯಿಸಿದ್ದು, ಸುಮಲತಾ ಏನು ಜ್ಯೋತಿಷಿಗಳಾ..? ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಏನು ಜ್ಯೋತಿಷಿಗಳಾ..? ಅವರು ಜ್ಯೋತಿಷಿಗಳಾಗಿ ಹೇಳಿದ್ರೆ ತುಂಬಾ ಸಂತೋಷ. ನನಗೆ ಗೊತ್ತಿಲ್ಲ ಸುಮಲತಾ ಜ್ಯೋತಿಷಿಗಳು ಅಂತಾ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಯಡಿಯೂರಪ್ಪ ಸರ್ಕಾರದಲ್ಲಿ ದೊಡ್ಡ ಚರ್ಚೆ ಆಯ್ತು. ಯಡಿಯೂರಪ್ಪ ಅವರು ಕ್ರಮ ತಗೋತೀನಿ ಅಂತ ಹೇಳಿದ್ರು. ಈಗ ಯಡಿಯೂರಪ್ಪ ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ ಎಂದರು.