ದುಬೈನಲ್ಲಿ ನಿರ್ಮಾಣವಾಯ್ತು ಜಗತ್ತಿನ ಅತಿದೊಡ್ಡ ಸ್ವಿಮ್ಮಿಂಗ್​ ಪೂಲ್

ದುಬೈನಲ್ಲಿ ನಿರ್ಮಾಣವಾಯ್ತು ಜಗತ್ತಿನ ಅತಿದೊಡ್ಡ ಸ್ವಿಮ್ಮಿಂಗ್​ ಪೂಲ್

ಐಷಾರಾಮಿ ಎಂದ ತಕ್ಷಣ ನಮಗೆ ತಟ್ಟಂತ ನೆನಪಾಗೋದು ದುಬೈ. ಸಮುದ್ರದ ನಟ್ಟನಡುವಿನಲ್ಲಿ ಬುರ್ಜ್ ಖಲೀಫಾದಂತಹ ಕಟ್ಟಡ ನಿರ್ಮಿಸಿ ಸುದ್ಧಿಯಾಗಿದ್ದ ದುಬೈ ಈಗ ಮತ್ತೊಂದು ಕಾರಣಕ್ಕೆ ಜನರ ಮೆಚ್ಚುಗೆ ಗಳಿಸುತ್ತಿದೆ.

ಜಗತ್ತಿನ ಅತಿದೊಡ್ಡ ಸ್ವಿಮ್ಮಿಂಗ್​ ಪೂಲ್ ಈಗ ದುಬೈನಲ್ಲಿ ನಿರ್ಮಾಣವಾಗಿದೆ. ಈ ಸ್ವಿಮ್ಮಿಂಗ್ ಪೂಲ್ ಜಗತ್ತಿನ ಅತಿದೊಡ್ಡ ಸ್ವಿಮ್ಮಿಂಗ್ ಪೂಲ್ ಎಂಬ ಹೆಗ್ಗಳಿಕೆ ಗಳಿಸಿದ್ದರ ಜೊತೆಗೆ ಗಿನ್ನಿಸ್ ರೆಕಾರ್ಡ್​ ಬುಕ್​ನಲ್ಲಿ ದಾಖಲಾಗಿದೆ. ಇದನ್ನು ದುಬೈನ ವೆಬ್​ಸೈಟ್​​ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ದುಬೈನ ನಾದ್ ಆಲ್ ಶೀಬಾದಲ್ಲಿ ಈ ಈಜುಕೊಳ ನಿರ್ಮಿಸಲಾಗಿದೆ. ಇದನ್ನು ಎಚ್.ಎಚ್ ಶೇಖ್ ಹಮ್ ದಾನ ಬಿನ್ ಮಹಮ್ಮದ್ ಮತ್ತು ಬಿನ್ ರಶೀದ್ ಅಲ್ ಮಹಕ್ಟೋಮ ಎಂಬುವವರು ಇತ್ತೀಚೆಗೆ ಉದ್ಘಾಟನೆ ಮಾಡಿದ್ದಾರೆ. ಈ ಸ್ವಿಮ್ಮಿಂಗ್​ ಪೂಲ್​ ಭಾನುವಾರದಿಂದ ಬುಧವಾರದ ವರೆಗೆ ಮಾತ್ರ ಸಾರ್ವಜನಿಕರಿಗೆ ಲಭ್ಯವಿದ್ದು, ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯ ವರೆಗೆ ತೆರೆದಿರುತ್ತದೆ.

ಈ ಈಜುಕೊಳವನ್ನು ವಿಶೇಷವಾಗಿ ನಿರ್ಮಾಣ ಮಾಡಲಾಗಿದೆ. 60 ಎಂಟಿಎಸ್ ಆಳ ಮತ್ತು 14 ಮಿಲಿಯನ್ ಐಟಿಎಸ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈಜುಕೊಳವನ್ನ ಸಿಟಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಅಪಾರ್ಟ್ಮೆಂಟ್, ಗ್ಯಾರೇಜ್, 56 ಅಂಡರ್ ವಾಟರ್ ಕ್ಯಾಮರಾಗಳು ಇವೆ.

ಪ್ರತಿ 6 ಗಂಟೆಗಳ ನಂತರ ನೀರನ್ನು ಫಿಲ್ಟರ್ ಮಾಡಿ ಸ್ವಚ್ಚಗೊಳಿಸುವ ಕೆಲಸವನ್ನು ನಾಸಾ ಫಿಲ್ಟರ್ ಟೆಕ್ನಾಲಜಿ ಯುವಿ ರೇಡಿಯೇಷನ್ ಅಳವಡಿಸಲಾಗಿದೆ.

-ದಿವ್ಯಾ ರಘುನಾಥ್

Related Stories

No stories found.
TV 5 Kannada
tv5kannada.com