Tuesday, May 17, 2022

ಬರ್ತ್​ಡೇ ಸೆಲೆಬ್ರೇಷನ್​ಗೆ ತಾನೇ ರೂಂ ಬುಕ್ ಮಾಡಿ ಅಲ್ಲೇ ಕೊಲೆಯಾದ ಮಹಿಳೆ..!

Must read

ಗೆಳೆಯನ ಜೊತೆ ಗ್ರಾಂಡ್ ಬರ್ತ್​ಡೇ ಪಾರ್ಟಿ ಮಾಡಲು ಹೋಗಿ ಆತನಿಂದಲೇ ಬರ್ಬರ ಹತ್ಯೆಗೀಡಾದ ಘಟನೆ ನವದೆಹಲಿಯ ಆಲಿಪುರದಲ್ಲಿ ನಡೆದಿದೆ.

ತನ್ನ ಬರ್ತ್​ಡೇ ಎಂದು ತಾನೇ ರೂಂ ಬುಕ್ ಮಾಡಿದ್ದ ರೂಂನಲ್ಲೇ ಮಹಿಳೆ ರಕ್ತಕಾರಿ ಸತ್ತುಬಿದ್ದಿದ್ದಾಳೆ. ಬೆಳಗಿನ ಜಾವ ರೂಂ ಬಾಯ್ ಉಪಹಾರ ನೀಡಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಫೇಸ್​​ಬುಕ್​ನಲ್ಲಿ  ಪರಿಚಯವಾದ ವಿಕ್ಕಿ ಎಂಬಾತನ ಜೊತೆ ಮಹಿಳೆ ಸಾಕಷ್ಟು ಸಲುಗೆಯಲ್ಲಿದ್ದಳು. ಕಳೆದ ಐದಾರು ಬಾರಿ ಅದೇ ಓಯೋ ಹೊಟೇಲ್ ನಲ್ಲಿ ರೂಂ ಬುಕ್ ಮಾಡಿ ಪಾರ್ಟಿ ಮಾಡಿದ್ದಳು. ಇದೇ ರೀತಿ ತನ್ನ ಹುಟ್ಡಿದ ಹಬ್ಬವನ್ನ ವಿಕ್ಕಿ ಜೊತೆ ಸೆಲಬ್ರೇಷನ್ ಮಾಡ್ಬೇಕೆಂಬ ಕಾರಣಕ್ಕೇ ಕೊಠಡಿ ಬುಕ್ ಮಾಡಿ ಅಂದು ಪಾರ್ಟಿ ಮಾಡಿದ್ದಾರೆ . ಇಬ್ಬರೂ ಎಣ್ಣೆ ಮತ್ತಿನಲ್ಲಿದ್ದರು .ಆ ಮಹಿಳೆ ನಶೆಯಲ್ಲಿ ವಿಕ್ಕಿ ಕೆನ್ನೆಗೆ ಬಾರಿಸಿದ್ದಾಳೆ .ಹಠಾತ್ ಹಲ್ಲೆಯಿಂದ ಸಿಟ್ಟಿಗೆದ್ದ ವಿಕ್ಕಿ ತಿರುಗೇಟು ನೀಡಿದ್ದಾನೆ.

ಹೀಗೆ ಜಗಳ ಶುರುವಾಗಿ ವಿಕ್ಕಿ ಮೇಲೆ ಬಾಟಲ್ ನಲ್ಲಿ ಮದ್ಯವನ್ನ ಎರಚಿದ್ದಾಳೆ. ಕಂಠಮಟ್ಟ ಕುಡಿದಿದ್ದ ವಿಕ್ಕಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಹೊಟೇಲ್​ನಿಂದ ಎಸ್ಕೇಪ್ ಆಗಿದ್ದ. ಬೆಳಗಿನ ಜಾವ ಮಹಿಳೆಯ ರೂಮಿನಂದ ಯಾವುದೇ ರೆಸ್ಪಾನ್ಸ್ ಬಾರದ ಹಿನ್ನಲೆ ಡೋರ್ ಲಾಕ್ ಒಡೆದು ನೋಡಿದಾಗ ಮಹಿಳೆ ರಕ್ತಕಾರಿ ಬಿದ್ದಿದ್ದಳು. ಪ್ರಕರಣ ದಾಖಲಿಸಿಕೊಂಡ ಆಲಿಪುರ ಪೊಲೀಸರು ಆರೋಪಿ ವಿಕ್ಕಿಯನ್ನ ಬಂಧಿಸಿದ್ದಾರೆ.

Latest article