ತಮಿಳುನಾಡಿನ ತೂತುಕುಡಿಯಲ್ಲಿ ಸ್ಟೇರ್ಲೈಟ್ ಕಂಪನಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬ ಕನಿಷ್ಠ ಒಬ್ಬರಾದರೂ ಸಾಯಲೇಬೇಕು ಎಂದು ಹೇಳಿದ ವೀಡೀಯೋ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Scroll down for Video)
ಪೊಲೀಸ್ ಒಬ್ಬ ಕನಿಷ್ಠ ಒಬ್ಬರಾದರೂ ಸಾಯಬೇಕು ಎಂದು ಹೇಳಿದ ಧ್ವನಿ ಕೇಳಿದ ಕೆಲವೇ ಕ್ಷಣಗಳಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಮಫ್ತಿಯಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬ ಬಸ್ನ ಮೇಲ್ಭಾಗದಲ್ಲಿ ನಿಂತು ರಸ್ತೆಯಲ್ಲಿದ್ದ ಪ್ರತಿಭಟನಕಾರರನ್ನು ಗುರಿಯಾಗಿ ಗುಂಡು ಹಾರಿಸುತ್ತಿದ್ದ. ಈ ಚಿತ್ರಗಳು ಕೂಡ ಘಟನೆಯ ಕ್ರೂರತೆಯನ್ನು ತೋರಿಸುತ್ತಿದೆ. ಮಂಗಳವಾರ ನಡೆದ ಪ್ರತಿಭಟನೆ ವೇಳೆ ಸುಮಾರು 9 ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದರು.
#WATCH Local police in Tuticorin seen with assault rifles to disperse protesters demanding a ban on Sterlite Industries. 9 protestors have lost their lives. #TamilNadu. (Earlier visuals) pic.twitter.com/hinYmbtIZQ
— ANI (@ANI) May 22, 2018
ತೂತುಕೂಡಿಯಲ್ಲಿ ನಡೆದ ಘಟನಾ ಸ್ಥಳಕ್ಕೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಭೇಟಿ ನೀಡಿ ಸಾಂತ್ವಾನ ಹೇಳಿದರು. ಮುಖ್ಯಮಂತ್ರಿ ಪಳನಿಸ್ವಾಮಿ ಪರಿಹಾರ ಮೊತ್ತ ಘೋಷಿಸಿದ್ದಾರೆ.