Tuesday, May 17, 2022

ಮತ ಕೇಳೋದಕ್ಕೆ ಬಂದ ಶಾಸಕನನ್ನು ಗ್ರಾಮದಿಂದ ಓಡಿಸಿದ ಮಂದಿ…!

Must read

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಪಶ್ಚಿಮ ಉತ್ತರ ಪ್ರದೇಶ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಚಟುವಟಿಕೆಯನ್ನು ಹೆಚ್ಚಿಸಿದ್ದಾರೆ. ಅದೇ ರೀತಿ ಬಿಜೆಪಿ ಶಾಸಕ ಮತ್ತು ಮುಜಾಫರ್ ನಗರದ ಖಟೋಲಿ ವಿಧಾನಸಭಾ ಸ್ಥಾನದ ಅಭ್ಯರ್ಥಿ ವಿಕ್ರಮ್ ಸಾಯಿನಿ ಗ್ರಾಮಸ್ಥರಿಂದ ವಿರೋಧ ಎದುರಿಸಬೇಕಾಯಿತು. ಶಾಸಕನ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು ಆತನನ್ನು ಕೆಳಕ್ಕಿಳಿಯೋದಕ್ಕೂ ಬಿಡದೆ ಗ್ರಾಮದಿಂದ ಓಡುವಂತೆ ಮಾಡಿದರು.

ಬಿಜೆಪಿ ಶಾಸಕ ಮತ್ತು ಮುಜಾಫರ್ ನಗರದ ಖಟೋಲಿ ವಿಧಾನಸಭೆಯ ಅಭ್ಯರ್ಥಿ ವಿಕ್ರಮ್ ಸಾಯಿನಿ ತಮ್ಮ ಕ್ಷೇತ್ರದ ಮಾನವ್ವರ್ ಪುರ ಗ್ರಾಮದಲ್ಲಿ ಸಭೆಗಾಗಿ ಬಂದಿದ್ದರು. ಈ ವೇಳೆ ತಮ್ಮ ಗ್ರಾಮದ ಯಾವೊಂದು ಕೆಲಸವನ್ನೂ ಮಾಡದ ಇವನ ವಿರುದ್ದ ಗ್ರಾಮಸ್ಥರು ಪ್ರತಿಭಟಿಸಿದರು ಜೊತೆಗೆ ವಿಕ್ರಮ್ ಸಾಯಿನಿಯನ್ನು ಗ್ರಾಮದಿಂದ ಓಡಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಶಾಸಕ ವಿಕ್ರಮ್ ಸಾಯಿನಿ ಕೂಡ ಕೈಮುಗಿದು ಕಾರಿನಲ್ಲಿ ಕುಳಿತಿರುವುದನ್ನು ಕಾಣಬಹುದು.

Latest article