Monday, November 29, 2021

ಯೋಗಿ-ಮೋದಿ ವೈರಲ್ ಫೋಟೋದ ಅಸಲಿಯತ್ತು ಬಿಚ್ಚಿಟ್ಟ ಕೇಂದ್ರ ಸಚಿವ ರಾಜನಾಥ್ ಸಿಂಗ್..!

Must read

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್​ ಆಗಿತ್ತು. ಈ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್ ಅವರ ಭುಜದ ಮೇಲೆ ಕೈ ಇಟ್ಟಿದ್ದರು ಮತ್ತು ಅವರು ಯೋಗಿ ಅವರಿಗೆ ಏನೋ ವಿವರಿಸುತ್ತಿದ್ದರು. ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ  ನಡೆಯಲಿರುವುದರಿಂದ, ಈ ಫೋಟೋ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಊಹಾಪೋಹಗಳು ಇದ್ದವು.

ಬಿಜೆಪಿ ಬೆಂಬಲಿಗರು ಈ ಚಿತ್ರವು ಯೋಗಿ ಅವರ ಐದು ವರ್ಷಗಳ ಕೆಲಸದ ಶೈಲಿಯನ್ನು ಮೋದಿ ಹೊಗಳುತ್ತಿದ್ದಾರೆ ಎಂದರೆ, ವಿರೋಧ ಪಕ್ಷಗಳು ಈ ಫೋಟೋದಲ್ಲಿ ಯೋಗಿಗೆ ಉತ್ತಮವಾಗಿ ಆಳಲು ಮತ್ತು ಜನರ ಹಿತಾಸಕ್ತಿಗಳನ್ನು ನೋಡಿಕೊಳ್ಳಲು ಪ್ರಧಾನಿ ವಿವರಿಸುತ್ತಿದ್ದಾರೆ ಎಂದು ಹೇಳಿತ್ತು. ಈಗ ಈ ಫೋಟೋದ ಅಸಲಿಯತ್ತನ್ನು ಕೇಂದ್ರ ರಕ್ಷಣ ಸಚಿವರು ಬಿಚ್ಚಿಟ್ಟಿದ್ದಾರೆ.

ರಾಜನಾಥ್ ಟ್ವೀಟ್ ಮಾಡಿ ಕಳೆದ ವಾರ ಟ್ವಿಟರ್​ನಲ್ಲಿ ಆದಿತ್ಯನಾಥ್ ಮತ್ತು ಮೋದಿಜಿ ಅವರ ಭುಜದ ಮೇಲೆ ಕೈ ಹಾಕಿಕೊಂಡಿದ್ದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಮೋದಿ ಅವರು ಯೋಗಿ ಜೀ ಅವರಿಗೆ ವೇಗವಾಗಿ ಬ್ಯಾಟಿಂಗ್ ಮಾಡಬೇಕು. ಸಂಪೂರ್ಣವಾಗಿ ಬಲವಾಗಿ ಆಡಿ, ಗೆಲುವು ಖಚಿತ ಎಂದಿದ್ದಾರೆ ಎಂದು ರಾಜನಾಥ್​ ಹೇಳಿದ್ದಾರೆ. ಜನಸಂಖ್ಯೆಯ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಸಾರ್ವತ್ರಿಕ ಚುನಾವಣೆ-2024ರ ಮೊದಲ ‘ಸೆಮಿ-ಫೈನಲ್’ ಎಂದು ಪರಿಗಣಿಸುವುದನ್ನು ಇಲ್ಲಿ ಸ್ಮರಿಸಬಹುದು.

Latest article