Tuesday, October 26, 2021

ಬೀಗದ ದೇವತೆಯಾದ ಕಾಳಿ ಮಹಾ ಮಾತೆ!

Must read

ಭಾರತವನ್ನು ದೇವರ ನಾಡು ಎಂದು ಕರೆಯುತ್ತಾರೆ. ಏಕೆಂದರೆ ಭಾರತದ ಬೀದಿ ಬೀದಿಗಳಲ್ಲಿ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನವು ತನ್ನದೇ ಆದ ವಿಭಿನ್ನ ನಂಬಿಕೆ ಮತ್ತು ಕಥೆಯನ್ನು ಹೊಂದಿದೆ. ದೇವಸ್ಥಾನಗಳಲ್ಲಿ ಅನೇಕ ಪವಾಡಗಳು ನಡೆಯುತ್ತವೆ. ಕೆಲವೊಂದು ದೇವಸ್ಧಾನಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಮತ್ತು ಈ ದೇವಾಲಯಗಳಲ್ಲಿನ ದೇವರು ತಮ್ಮ ಭಕ್ತರ ಆಸೆಗಳನ್ನು ಈಡೇರಿಸುವ ವಿಧಾನಗಳು ಸಹ ಬಹಳ ವಿಚಿತ್ರವಾಗಿವೆ.ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಚಿನ್ನ ಮತ್ತು ಬೆಳ್ಳಿಯ ಬೀಗಗಳನ್ನು ನೀಡುವುದು ಈ ದೇವಾಲಯದ ವಾಡಿಕೆಯಾಗಿದೆ.
ಇದು ಉತ್ತರ ಪ್ರದೇಶದ ರಾಜಧಾನಿ ಲಕ್ನೊದಿಂದ 80 ಕಿಮೀ ದೂರದಲ್ಲಿರುವ ಕಾನ್ಪುರದ ಬಂಗಾಳಿ ಮೊಹಲ್ ಪ್ರದೇಶದಲ್ಲಿ ಇದೆ. ಈ ದೇವಸ್ಥಾನವನ್ನು 1949 ರಲ್ಲಿ ನಿರ್ಮಿಸಲಾಗಿದೆ ಅಂದಿನಿಂದ ಇಂದಿನವರೆಗೂ ಈ ಪದ್ಧತಿಯನ್ನು . ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಸಾಮಾನ್ಯವಾಗಿ ಕಬ್ಬಿಣದಿಂದ ಮಾಡಿದ ಬೀಗಗಳನ್ನು ನೀಡುತ್ತಾರೆ. ಆದರೆ ನವರಾತ್ರಿಯ ಸಮಯದಲ್ಲಿ ಜನರು ಇಲ್ಲಿ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ಲೋಹಗಳಿಂದ ಮಾಡಿದ ಬೀಗಗಳ ಅರ್ಪಣೆಗಳನ್ನು ಮಾಡುತ್ತಾರೆ. ಪ್ರತಿದಿನ ಸುಮಾರು 500 ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ದುರ್ಗಾದೇವಿಯ ದೈತ್ಯ ವಿಗ್ರಹದ ಮುಂದೆ ಬೀಗಗಳನ್ನು ಅರ್ಪಿಸುತ್ತಾರೆ. ಪ್ರತಿಮೆ ಮುಂದೆ ಬೀಗಗಳನ್ನು ನೇರವಾಗಿ ಇರಿಸಲಾಗಿಲ್ಲ, ಆದರೆ ಪ್ರತಿಮೆಯಿಂದ ಸ್ವಲ್ಪ ದೂರದಲ್ಲಿರುವ ಕಂಬಗಳಿಗೆ ಜೋಡಿಸಲಾದ ಹಗ್ಗಗಳಲ್ಲಿ ಕಟ್ಟಲಾಗಿದೆ. ಈ ವಿಶಿಷ್ಟ ಸಂಪ್ರದಾಯದ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ. ತಾರಚಂದ್ ರವರು ದೇವಾಲಯದ ಮೊದಲ ಅರ್ಚಕರು ಮತ್ತು ದೇವಾಲಯವನ್ನು ನಿರ್ಮಾಣ ಮಾಡಿದವರು. ದೇವಿಯ ವಿಗ್ರಹವನ್ನು ಸರಪಳಿ ಮತ್ತು ಬೀಗಗಳನ್ನು ಹಾಕಿ ಬಂಧಿಸಲಾಗಿತ್ತು. ದೇವಿಯ ಉತ್ಸಾಹಿ ಭಕ್ತರನ್ನು ಕೊಲೆ ಮಾಡಿದ್ದಾರೆಂದು ಸುಳ್ಳು ಅಪವಾದನೆಗೆ ಬಲಿಯಾಗಿದ್ದರು. ಆ ಸಂದರ್ಭದಲ್ಲಿ ತಾರಚಂದ್ ರವರು ದೇವಿಯ ವಿಗ್ರಹವನ್ನು ಸರಪಳಿ ಮತ್ತು ಬೀಗ ಹಾಕಿದರು ಎಂದು ನಂಬಲಾಗಿದೆ. ದೇವಿಯು ಭಕ್ತನನ್ನು ಆಶೀರ್ವದಿಸುವವರೆಗೆ ತನ್ನನ್ನ ನಿರಪರಾಧಿ ಎಂದು ಸಾಬೀತುಪಡಿಸುವವರೆಗೂ ತಾನು ಬೀಗ ಮತ್ತು ಸರಪಣಿಯನ್ನು ತೆರೆಯುವುದಿಲ್ಲ ಎಂದು ತಾರಾಚಂದನು ಪ್ರತಿಜ್ಞೆ ಮಾಡಿದನಂತೆ . ಭಕ್ತನನ್ನು ಜೈಲಿಗೆ ಹಾಕಿದ ನಂತರ, ತಾರಾಜಿಯು ಸಾಮಾನ್ಯ ಪೂಜೆ ಮತ್ತು ಆರತಿಯನ್ನು ಮಾಡಲಿಲ್ಲ ಮತ್ತು ದೇವಿಯನ್ನು ಸರಪಳಿ ಮತ್ತು ಬೀಗಗಳಲ್ಲಿ ಬಿಚ್ಚಲಿಲ್ಲ. ಇದು ಹಲವಾರು ತಿಂಗಳುಗಳ ಕಾಲ ನಡೆಯಿತು. ಯಾವಾಗ ತೀರ್ಪು ಭಕ್ತರ ಪರವಾಗಿ ಬಂದಿತು ಮತ್ತು ನ್ಯಾಯಾಲಯವು ತಾರಾಚಂದ್ ರವರ ಪರ ಬಂದ ನಂತರ ದೇವಿಗೆ ಹಾಕಿದ ಸರಪಳಿ ಮತ್ತು ಬೀಗಗಳನ್ನು ತೆಗೆದರು. ಅಂದಿನಿಂದ ಈ ದೇವಸ್ಥಾನದಲ್ಲಿ ಬೀಗಗಳ ಅರ್ಪಣೆ ಪ್ರಾರಂಭವಾಯಿತು, ಇದು ಇಲ್ಲಿಯವರೆಗೆ ಮುಂದುವರಿಯುತ್ತದೆ. ಇದಲ್ಲದೇ ಇನೊಂದು ನಡೆದ ಘಟನೆಯಿದೆ, ಅವಳು ಪ್ರತಿದಿನ ಬೆಳಿಗ್ಗೆ ತಾಯಿಯ ದೇವಸ್ಥಾನಕ್ಕೆ ಪೂಜೆಗಾಗಿ ಬರುತ್ತಿದ್ದಳು. ಒಂದು ದಿನ ಅವಳು ದೇವಾಲಯದ ಆವರಣಕ್ಕೆ ಬೀಗ ಹಾಕಲು ಆರಂಭಿಸಿದಾಗ, ಪಂಡಿತನು ಕಾರಣವನ್ನು ಕೇಳಿದನು. ಆ ತಾಯಿ ಕಾಳಿ ತನ್ನ ಕನಸಿನಲ್ಲಿ ಬಂದಳು ಎಂದು ಹೇಳಿದಳು ಮತ್ತು ಅವಳು ದೇವಸ್ಥಾನದ ಅಂಗಳದಲ್ಲಿ ತನ್ನ ಹೆಸರಿನ ಬೀಗ ಹಾಕಿದರೆ, ಆಕೆಯ ಪ್ರತಿಯೊಂದು ಆಸೆ ಈಡೇರುತ್ತದೆ ಎಂದು ದೇವಿಯು ಹೇಳಿದಾಳೆ ಎಂದು ಆ ಮಹಿಳೆ ಹೇಳಿದ್ದಾಳಂತೆ .ಬೀಗವನ್ನು ಹಾಕಿದ ನಂತರ ಆ ಮಹಿಳೆಯು ಅಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಹೇಳಲಾಗಿದೆ. ಕೆಲವು ವರ್ಷಗಳ ನಂತರ ಆ ಬೀಗ ತೆರೆದಿತ್ತು ಮತ್ತು ಮದಿರದ ಗೋಡೆಯ ಮೇಲೆ ಅವಳ ಆಸೆ ಈಡೇರಿದೆ ಎಂದು ಬರೆಯಲಾಗಿತ್ತು. ಹಾಗಾಗಿ ಅವಳು ಈ ಬೀಗವನ್ನು ತೆರೆಯುತ್ತಿದ್ದಾಳೆ ಎಂದು ಗೊಡೆಯ ಮೇಲೆ ಬರೆಯಲಾಗಿತ್ತು, ಆದರೆ ಆ ಮಹಿಳೆ ಬೀಗವನ್ನು ತೆರೆಯುವುದನ್ನು ಯಾರೂ ನೋಡಲಿಲ್ಲ ಮತ್ತು ಅಂದಿನಿಂದ ತಾಯಿ ಕಾಳಿಯ ಹೆಸರನ್ನು ಬೀಗದ ದೇವತೆ ಎಂದು ಬದಲಾಯಿಸಲಾಯಿತು.

Also read:  ಸರಕಾರಿ ಬಂಗಲೆಯಲ್ಲಿ ಮಾಜಿ ಸಿಎಂಗಳು ತಂಗುವಂತಿಲ್ಲ: ಸುಪ್ರೀಂಕೋರ್ಟ್​

More articles

Latest article