Wednesday, May 18, 2022

ಸಂಬಳ ಕೊಡಲು ದುಡ್ಡಿಲ್ಲ: ಕಾರ್ಮಿಕರಗೆ ಸಂಬಳಕ್ಕೆ ಬದಲು ಗೋಧಿ ವಿತರಿಸಲು ಮುಂದಾದ ತಾಲಿಬಾನ್..!

Must read

ತಾಲಿಬಾನ್ ವಾಪಸಾತಿಯ ನಂತರ ಆಫ್ಘಾನಿಸ್ತಾನದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ತಾಲಿಬಾನ್ ಸರ್ಕಾರವು ಕಾರ್ಮಿಕರಿಗೆ ಹಣದ ರೂಪದಲ್ಲಿ ಸಂಭಾವನೆ ನೀಡುವ ಬದಲು ಗೋಧಿಯನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರಂತೆ.

ಸುದ್ದಿ ಮೂಲಗಳ ಪ್ರಕಾರ, ಮಧ್ಯಂತರ ತಾಲಿಬಾನ್ ಸರ್ಕಾರ ಕಾರ್ಮಿಕರಿಗೆ ಸಂಬಳವಾಗಿ ಗೋಧಿಯನ್ನು ಒದಗಿಸುವುದಾಗಿ ಘೋಷಿಸಿದೆ. ಈ ಯೋಜನೆಯ ಮೂಲಕ ಕಾಬೂಲ್​ನಲ್ಲಿ ಸುಮಾರು 40,000 ಜನರಿಗೆ ಉದ್ಯೋಗ ಒದಗಿಸುವ ಗುರಿಯನ್ನು ತಾಲಿಬಾನ್ ಹೊಂದಿದೆ. ಈ ಯೋಜನೆಯನ್ನು ಆಫ್ಘಾನಿಸ್ತಾನದ ಹಲವಾರು ಪ್ರಮುಖ ನಗರಗಳಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿಕೊಂಡದೆ. ತಾಲಿಬಾನ್ ಮುಖ್ಯ ವಕ್ತಾರ ಜಬೀಹುಲ್ಲಾ ಮುಜಾಹಿದ್ ಈ ಯೋಜನೆ ನಿರುದ್ಯೋಗದ ವಿರುದ್ಧ ಹೋರಾಡಲು ಮತ್ತು ದೇಶದಲ್ಲಿ ಹಸಿವನ್ನು ಎದುರಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು.

ಈ ಯೋಜನೆಯಡಿ ಎರಡು ತಿಂಗಳಲ್ಲಿ ಕಾಬೂಲ್​ನಲ್ಲಿ ಸುಮಾರು 11,600 ಟನ್ ಗೋಧಿ ವಿತರಿಸಲಾಗುವುದು. ಇದಲ್ಲದೆ, ಹೆರಾತ್, ಜಲಾಲಾಬಾದ್, ಕಂದಹಾರ್, ಮಜರ್-ಎ-ಶರೀಫ್ ಮತ್ತು ಪೋಲ್-ಎ-ಖೋಮ್ರಿ ಸೇರಿದಂತೆ ದೇಶದ ಉಳಿದ ನಗರಗಳಿಗೆ 55,000 ಟನ್ ಗೋಧಿಯನ್ನು ವಿತರಿಸಲು ಯೋಜಿಸಲಾಗಿದೆ. ಯೋಜನೆಯಡಿ ಬರ ಎದುರಿಸಲು ವ್ಯವಸ್ಥೆ ಮಾಡಲಾಗುವುದು. ಇದು ಬೆಟ್ಟಗಳಲ್ಲಿ ನೀರಿನ ಕಾಲುವೆಗಳು ಮತ್ತು ನೀರು ಶೇಖರಣಾ ಛಾವಣಿಗಳನ್ನು ಅಗೆಯುವುದು ಒಳಗೊಂಡಿರುತ್ತದೆ.

Latest article