ತಾಜ್ಮಹಲ್ ಜೈಪುರನಿಗೆ ರಾಜನಿಗೆ ಸೇರಿದ್ದು, ಅದನ್ನ ಶಹಜಾನ್ ಅಕ್ರಮವಾಗ ವಶಕ್ಕೆ ಪಡೆದಿದ್ದಾನೆಂದು ಬಿಜೆಪಿ ಸಂಸದೆ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದ ರಾಜಸಮಂದ್ನ ಸಂಸದೆಯಾಗಿರುವ ದಿಯಾ ಕುಮಾರಿಯವರು ಈ ಹೇಳಿಕೆ ನೀಡಿದ್ದಾರೆ.
ಜೈಪುರದ ರಾಜಮನೆತನದವರಾದ ದಿಯಾ ಕುಮಾರಿಯವರು, ತಾಜ್ ಮಹಲ್ ರಾಜ ಮನೆತನದ್ದು ಅದರ ದಾಖಲೆ ಪತ್ರಗಳು ಈಗಲೂ ನಮ್ಮಬಳಿ ಇದೆ ಆ ದಾಖಲೆಗಳನ್ನ ಪರಿಶೀಲನೆ ಮಾಡಬಹುದು ಎಂದಿದ್ದಾರೆ. ಈಗಾಗಲೆ ಅಯೋಧ್ಯೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ತಾಜ್ ಮಹಲ್ ನಲ್ಲಿರುವ 20 ಕೊಠಡಿಗಳನ್ನ ತೆರೆಯಬೇಕು.
ಅದರಲ್ಲಿ ತೇಜೋಮಹಲ್ ದೇವಸ್ಥಾನಕ್ಕೆ ಸಂಬಂಧಿಸಿದ ವಿಗ್ರಹಗಳು ದಾಖಲೆಗಳು ಇರಬಹುದು ಹೀಗಾಗಿ ಪುರಾತತ್ವ ಇಲಾಖೆಗೆ ಬಾಗಿಲು ತೆರೆದು ಪರಿಶೀಲನೆ ನಡೆಸಲು ಸೂಚನೆ ನೀಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.