Wednesday, June 29, 2022

ಕಾಂಗ್ರೆಸ್​ ತೊರೆದಿದ್ದ ಸುನಿಲ್​ ಜಾಖರ್​ ಬಿಜೆಪಿ ಸೇರ್ಪಡೆ..!

Must read

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಕಾಂಗ್ರೆಸ್​ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಇತ್ತೀಚೆಗೆ ಕಾಂಗ್ರೆಸ್​ ತೊರೆದು ಸುದ್ದಿಯಾಗಿದ್ರು..ಕಾಂಗ್ರೆಸ್​ ತೊರೆದ ಅವರು ಬಿಜೆಪಿ ಸೇರ್ಪಡೆಗೊಳ್ಳಬಹುದು ಎಂಬ ಅನುಮಾನಗಳ ಬೆನ್ನಲ್ಲೆ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷಕ್ಕೆ ಸೇರಿದ ನಂತರ, ಸುನಿಲ್ ಜಾಖರ್ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವಾರು ಉನ್ನತ ಬಿಜೆಪಿ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಮೂರು ತಲೆಮಾರುಗಳ ಕಾಲ ಕಾಂಗ್ರೆಸ್​ನಲ್ಲಿ ಕೆಲಸ ಮಾಡಿದ್ದೇನೆ. ಪಕ್ಷವನ್ನು ಒಂದು ಕುಟುಂಬವೆಂದು ಪರಿಗಣಿಸಿ, ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ಒಟ್ಟಿಗೆ ಇದ್ದೆವು. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಪಂಜಾಬನ್ನು ಒಡೆಯಲು ಸಾಧ್ಯವಿಲ್ಲ ಎಂದು ನಾನು ಧ್ವನಿ ಎತ್ತಿದ್ದಕ್ಕಾಗಿ ಕಾಂಗ್ರೆಸ್​ ನನ್ನನ್ನು ಮೂಲೆಗುಂಪು ಮಾಡಿತು ಎಂದರು.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸುನಿಲ್ ಜಾಖರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.. ಜಾಖರ್ ಪ್ರಾಮಾಣಿಕ ಇಮೇಜ್ ನೊಂದಿಗೆ ಕೆಲಸ ಮಾಡಿದ್ದಾರೆ, ಅವರು ಕಾಂಗ್ರೆಸ್ ನಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪಂಜಾಬಿನಲ್ಲಿ ರಾಷ್ಟ್ರೀಯತಾವಾದಿ ಶಕ್ತಿಗಳು ಬಲವಾಗಿರಬೇಕು. ಪಂಜಾಬ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಸುನಿಲ್ ಜಾಖರ್ ನಮ್ಮೊಂದಿಗೆ ಸೇರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.

Latest article