Sunday, October 2, 2022

ಆಕ್ಷೇಪಾರ್ಹ ವಿಡಿಯೋ ಲೀಕ್​; ಸೆ.24ರವರೆಗೆ ವಿವಿ ಬಂದ್

Must read

ಚಂಡೀಗಢ ವಿವಿಯಲ್ಲಿ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ಲೀಕ್​ ಹಿನ್ನೆಲೆ, ಇಬ್ಬರು ವಾರ್ಡನ್​ಗಳನ್ನ ಅಮಾನತು ಮಾಡಲಾಗಿದೆ. ಪಂಜಾಬ್​ ಸರ್ಕಾರ ವಿಡಿಯೋ ಲೀಕ್​ ಸಂಬಂಧ SITಗೆ ತನಿಖೆಯನ್ನ ವರ್ಗಾವಣೆ ಮಾಡಿದ್ದು, ತನಿಖೆಯನ್ನು ಚುರುಕುಗೊಳಿಸಿದ ತಂಡ ಕೂಡಲೇ ಹಾಸ್ಟೆಲ್​ನ ಇಬ್ಬರು ವಾರ್ಡನ್​ಗಳನ್ನ ಅಮಾನತು ಮಾಡಿದ್ದಾಗಿ ತಿಳಿಸಿದೆ. 3 ಮಹಿಳಾ ಅಧಿಕಾರಿಗಳಿರುವ ವಿಶೇಷ ತಂಡ ಇದಾಗಿದ್ದು, ಈಗಾಗಲೇ ಪೊಲೀಸರು ಮೂವರು ಆರೋಪಿಗಳನ್ನ ವಶಪಡಿಸಿಕೊಂಡಿದ್ದಾರೆ.
ಇನ್ನು ವಿಡಿಯೋ ಲೀಕ್​ ಕೇಸ್​ ಹಿನ್ನೆಲೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದೆ. ಈ ಹಿನ್ನೆಲೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಶನಿವಾರದವರೆಗೂ ಬಂದ್​ ಘೋಷಿಸಲಾಗಿದ್ದು, ಸೆಪ್ಟಂಬರ್​ 24ರವರೆಗೂ ತರಗತಿಗಳು ನಡೆಯುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

Latest article