2022ರ ಪುಲಿಟ್ಜರ್ ಪ್ರಶಸ್ತಿ ವಿಜೇತರನ್ನು ಸೋಮವಾರ ಪ್ರಕಟಿಸಲಾಗಿದೆ. ಪತ್ರಿಕೋದ್ಯಮ, ಪುಸ್ತಕಗಳು, ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ಪುಲಿಟ್ಜರ್ ವಿಜೇತರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ.
ಭಾರತೀಯರಲ್ಲಿ ಅದ್ನಾನ್ ಅಬಿದಿ, ಸನಾ ಇರ್ಷಾದ್ ಮಟ್ಟೂ, ಅಮಿತ್ ದವೆ ಮತ್ತು ದಿವಂಗತ ರಾಯಿಟರ್ಸ್ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಈ ಪಟ್ಟಿಯಲ್ಲಿ ಸೇರಿದ್ದಾರೆ. ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವಿಕೆ ಮತ್ತು ಫ್ಲೋರಿಡಾದಲ್ಲಿ ಸರ್ಫ್ಸೈಡ್ ಕಾಂಡೋಮಿನಿಯಂ ಕುಸಿತದ ಘಟನೆಗಳನ್ನು ಈ ಪತ್ರಕರ್ತರು ವರದಿ ಮಾಡಿದ್ದರು.
ಭಾರತದಲ್ಲಿ ಕೋವಿಡ್ ಸಾವಿನ ಛಾಯಾಚಿತ್ರಗಳಿಗಾಗಿ ಅದ್ನಾನ್ ಅಬಿದಿ, ಸನಾ ಇರ್ಷಾದ್ ಮಟ್ಟೂ ಮತ್ತು ಅಮಿತ್ ದವೆ ಅವರೊಂದಿಗೆ ರಾಯಿಟರ್ಸ್ ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿ ಅವರಿಗೆ ಪುಲಿಟ್ಜರ್ ಪ್ರಶಸ್ತಿ ನೀಡಲಾಗಿದೆ. ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಸಂಘರ್ಷ ಸ್ಥಳದಲ್ಲಿ ಸಿದ್ದಿಕಿ ಕಳೆದ ವರ್ಷ ನಿಧನರಾಗಿದ್ದರು.