Thursday, January 20, 2022

ಆರು ಮಹಿಳಾ ಸಂಸದರೊಂದಿಗೆ ಶಶಿ ತರೂರ್​ ಸೆಲ್ಫಿ: ಹಲವರಿಂದ ಟೀಕೆ

Must read

ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಸೆಲ್ಫಿಯೊಂದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಸೋಮವಾರ ಆರು ಮಹಿಳಾ ಸಂಸದರೊಂದಿಗೆ ಸೆಲ್ಫಿಯೊಂದನ್ನು ಟ್ವಿಟರ್​​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೆಲ್ಫಿಯೊಂದಿಗೆ ಶೀರ್ಷಿಕೆಯಲ್ಲಿ ಅವರು ಹೀಗೆ ಬರೆದಿದ್ದಾರೆ, ‘ಲೋಕಸಭೆ ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ..? ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇಂದು ಬೆಳಿಗ್ಗೆ ನನ್ನ ಆರು ಸಹ ಸಂಸದರೊಂದಿಗೆ ಶಶಿ ತರೂರ್ ಅವರ ಸೆಲ್ಫಿಯ ಶೀರ್ಷಿಕೆಯನ್ನು ಅಂತರ್ಜಾಲ ಮಾಧ್ಯಮದ ಜನರು ವಿವಿಧ ಕಾಮೆಂಟ್​ಗಳನ್ನು ಮಾಡಿದ್ದು ಟ್ರೋಲ್ ಆಗಿದ್ದಾರೆ.

ವಾಸ್ತವವಾಗಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಬಾರಾಮತಿ ಸಂಸದೆ ಸುಪ್ರಿಯಾ ಸುಲೆ, ಪಟಿಯಾಲಾ ಸಂಸದ ಪರ್ನೀತ್ ಕೌರ್, ದಕ್ಷಿಣ ಚೆನ್ನೈ ಸಂಸದ ತಮಿಜಾಚಿ ತಂಗಪಾಂಡಿಯನ್, ಜಾದವ್ ಪುರ್ ಸಂಸದ ಮಿಮಿ ಚಕ್ರವರ್ತಿ, ಬಸಿರ್ಹತ್ ಸಂಸದ ನುಸ್ರತ್ ಜಹಾನ್ ಮತ್ತು ಕರೂರ್ ಸಂಸದ ಎಸ್ ಜೋತಿಮಾನಿ ಅವರೊಂದಿಗೆ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದೇ ಚಿತ್ರ ಅಂತರ್ಜಾಲ ಮಾಧ್ಯಮದಲ್ಲಿ ಕೋಲಾಹಲ ಸೃಷ್ಟಿಸಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಸಂಸತ್ತು ಮತ್ತು ರಾಜಕೀಯಕ್ಕೆ ಅವರ ಕೊಡುಗೆಯನ್ನು ನೀವು ಆಕರ್ಷಣೆಯ ವಸ್ತುವಾಗಿ ಅಪಮಾನಿಸುತ್ತಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಸಂಸತ್ತಿನಲ್ಲಿ ಮಹಿಳೆಯರನ್ನು ಆಕ್ಷೇಪಾರ್ಹವಾಗಿ ಮಾಡುವುದನ್ನು ನಿಲ್ಲಿಸಿ. ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸೋಮವಾರ ಅಂಗೀಕರಿಸಿದೆ. ಚರ್ಚೆಗೆ ಆಸ್ಪದ ನೀಡುತ್ತಿಲ್ಲ ಎಂದು ವಿರೋಧಪಕ್ಷಗಳು ಪ್ರತಿರೋಧ ತೋರುತ್ತಿದ್ದು ಈ ಮಧ್ಯೆ ಶಶಿತರೂರ್​ರ ಈ ಟ್ವೀಟ್​ ಭಾರಿ ಚರ್ಚೆಗೆ ಗ್ರಾಸವಾಗಿದೆ.

 

Latest article