Tuesday, October 26, 2021

RSS ಜ್ಞಾನ ಕೇವಲ ಕೋಮುವಾದ ಮಾತ್ರ-ಭೂಪೇಶ್ ಬಾಘೇಲ್

Must read

ಛತ್ತೀಸ್‌ಗಢದ ಕವರ್ಡ್ಹಾದಲ್ಲಿ ಕೋಮು ಗಲಭೆಯ ನೆಪವೊಡ್ಡಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್) ಸಂಘಟನೆಗಳ ನಡುವೆ ಪ್ರತಿಭಟನೆ ಮುಂದುವರೆದಿದೆ. ಏತನ್ಮಧ್ಯೆ, ರಾಜ್ಯ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ಆರ್​ಎಸ್​ಎಸ್ ವಿರುದ್ಧ ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ.

ಆರ್​ಎಸ್​ಎಸ್ ಜನರಿಗೆ ಕೇವಲ ಎರಡು ವಿಷಯಗಳಲ್ಲಿ ಮಾತ್ರ ಪಾಂಡಿತ್ಯವಿದೆ. ಒಂದು ಮತಾಂತರ, ಇನ್ನೊಂದು ಕೋಮುವಾದ. ಈ ಜನರು ಪ್ರತಿಯೊಂದು ಸಣ್ಣ ಘಟನೆಗೂ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಂಭವಿಸಲು ಬಿಡುವುದಿಲ್ಲ ಎಂದರು.

ಈಗ ಛತ್ತೀಸ್​​ಗಢದಲ್ಲಿ ಅವರಿಗೆ ವಿರೋಧ ಮಾಡಲು ಏನೂ ಸಿಗುತ್ತಿಲ್ಲ. ಇವರಿಗೆ  ರೈತರು, ಕಾರ್ಮಿಕರು, ಬುಡಕಟ್ಟು ಜನರು, ಪರಿಶಿಷ್ಟ ಜಾತಿಗಳು, ವ್ಯಾಪಾರ ಮತ್ತು ಕೈಗಾರಿಕೆಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಮತಾಂತರ, ಕೋಮುವಾದದ ಬಗ್ಗೆ ಹೋರಾಟ ನಡೆಸುತ್ತಿದ್ದಾರೆ ಎಂದರು.

More articles

Latest article