Thursday, January 20, 2022

ಕೃಷಿ ಕಾಯ್ದೆ ವಾಪಾಸಾತಿಯ ನಂತರ ಸರ್ಕಾರಕ್ಕೆ ರಾಹುಲ್ ಪ್ರಶ್ನೆ..!

Must read

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮಸೂದೆಯ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದವು. ಕೋಲಾಹಲದ ನಡುವೆ, ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ಎರಡೂ ಸದನಗಳಲ್ಲಿ ಅಂಗೀಕರಿಸಲಾಯಿತು. ಮಸೂದೆಯನ್ನು ಅಂಗೀಕರಿಸಿದ ನಂತರ, ಇದು ರೈತರು ಮತ್ತು ಕಾರ್ಮಿಕರ ಯಶಸ್ಸು, ಇದು ಈ ದೇಶದ ಯಶಸ್ಸು ಎಂದು ರಾಹುಲ್ ಗಾಂಧಿ ಹೇಳಿದರು.

ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ನೀಡದ ಈ ಕಾನೂನುಗಳನ್ನು ರದ್ದುಗೊಳಿಸಿದ ರೀತಿ, ಸರ್ಕಾರಕ್ಕೆ ಚರ್ಚೆಗೆ ಭಯವಿದೆ ಎಂಬುದನ್ನು ತೋರಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ಅವರು ತಪ್ಪು ಮಾಡಿದ್ದಾರೆ ಎಂದು ಇದು ತೋರಿಸುತ್ತದೆ. ಹುತಾತ್ಮರಾದ ರೈತರ ಬಗ್ಗೆ ಚರ್ಚೆ ಆಗಬೇಕಾಗಿತ್ತು. ರೂಪಿಸಲಾದ ಕೃಷಿ ಕಾನೂನುಗಳ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಲಖಿಂಪುರ ಖೇರಿ ಬಗ್ಗೆಯೂ ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಮನಸ್ಸಿನಲ್ಲಿ ಗೊಂದಲವಿದೆ ಎಂದು ರಾಹುಲ್ ಗಾಂಧಿ ಹೇಳಿದರು. ರೈತರು, ಕಾರ್ಮಿಕರು ಮತ್ತು ಬಡ ಜನರನ್ನು ನಿಗ್ರಹಿಸಬಹುದು ಎಂದು ಸರ್ಕಾರ ಭಾವಿಸುತ್ತದೆ. ಕೃಷಿ ಕಾನೂನುಗಳನ್ನು ಜಾರಿಗೊಳಿಸುವ ಮುಖಾಂತರ ಸರ್ಕಾರ ರೈತರ ಮೇಲೆ ದಾಳಿ ನಡೆಸುತ್ತಿದೆ ಎಂದು ರಾಹುಲ್ ಆರೋಪಿಸಿದರು. ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ರೈತರ ತೊಂದರೆಗಳ ದೊಡ್ಡ ಪಟ್ಟಿಯನ್ನು ನಾವು ಬೆಂಬಲಿಸುತ್ತೇವೆ.

ಹಾಗಾದರೆ ಸಂಸತ್ತಿನ ಅಗತ್ಯವೇನು?

ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ತಂದಾಗ ಪ್ರಧಾನಿ ಕ್ಷಮೆಯಾಚಿಸಿದಾಗ ಚರ್ಚೆಯ ಅಗತ್ಯವೇನಿದೆ ಎಂದು ರಾಹುಲ್ ಗಾಂಧಿ ಅವರನ್ನು ಕೇಳಿದಾಗ. ರಾಹುಲ್ ಗಾಂಧಿ.. ಹಾಗಾದರೆ ಸಂಸತ್ತಿನ ಅಗತ್ಯವೇನು ಎಂದು ಹೇಳಿದರು. ಕೇಂದ್ರ ಸರ್ಕಾರ ಜನರ ಒಳಿತಿಗಾಗಿಯೇ ಕಾನೂನು ರೂಪಿಸಿದ್ದರೆ ಪ್ರಧಾನಿ ಕ್ಷಮೆಯಾಚಿಸುವ ಅಗತ್ಯವೇನಿತ್ತು ಎಂದು ರಾಹುಲ್​ ಕೇಳಿದರು.

Latest article