Friday, January 21, 2022

ಬಂಗಾಳದಲ್ಲಿ ಗಂಗಾ ಸಾಗರ ಮೇಳಕ್ಕೆ ತಯಾರಿ..!

Must read

ಬಂಗಾಳದ ಗಂಗಾ ಸಾಗರ ಮೇಳದಲ್ಲಿ ಕೊರೊನಾ ತಡೆಗಟ್ಟಲು ಆಡಳಿತ ಸಂಪೂರ್ಣ ಎಚ್ಚರಿಕೆ ವಹಿಸಿದೆ. ಎಲ್ಲಾ ಪ್ರವೇಶ ಸ್ಥಳಗಳಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ ಎಂದು ದಕ್ಷಿಣ 24 ಪರಗಣ ಡಿಎಂಪಿ ಉಲಗನಾಥನ್ ಹೇಳಿದರು.

ಜನಸಂದಣಿಯನ್ನು ನಿಯಂತ್ರಿಸಲು ವ್ಯಾಪಕ ನಿರ್ವಹಣೆ ಮಾಡಲಾಗಿದೆ. ಸ್ಥಳದಲ್ಲೇ ಕೊರೊನಾ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಜಾತ್ರೆಯ ಸುತ್ತಲೂ ಪರೀಕ್ಷಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಗಂಗಾಸಾಗರ ಮೇಳಕ್ಕೆ ಭೇಟಿ ನೀಡುವ ಯಾತ್ರಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ.

ಇದೇ ವೇಳೆ ವಾರ್ಷಿಕ ಜಾತ್ರೆಗೆ ಗಂಗಾ ಸಾಗರ ದ್ವೀಪಕ್ಕೆ ಹೆಚ್ಚು ಜನರನ್ನು ಕಳುಹಿಸದಂತೆ ಆಡಳಿತಕ್ಕೆ ಸೂಚಿಸಲಾಗಿದೆ. ದಕ್ಷಿಣ 24 ಪರಗಣದ ಸಾಗರ್ ದ್ವೀಪವನ್ನು ತಲುಪಲು ವಾಹನಗಳು ಬಾರದಂತೆ ಅವರು ಯಾತ್ರಿಕರನ್ನು ವಿನಂತಿಸಿದರು. ಎರಡು ಬಾಸ್ಕ್​ ಧರಿಸಿ ಸಹಕರಿಸಬೇಕಾಗಿ ಕೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಪೊಲೀಸರ ಸಹಾಯ ಪಡೆಯಿರಿ. ಇದೇ ವೇಳೆ ಅವರು, ‘ಕರೋನಾ ವೇಗವಾಗಿ ಬೆಳೆಯುತ್ತಿರುವುದರಿಂದ ಸಾಧುಗಳು ಸೇರಿದಂತೆ ಎಲ್ಲ ಭಕ್ತರುಗಳಿಗೆ ಎಚ್ಚರಿಕೆ ನೀಡಿದ್ದಾರೆ..

Latest article