ಕೊರೊನಾ ಮೊದಲ ಅಲೆಯಲ್ಲಿ ಹಠಾತ್ ಲಾಕ್ಡೌನ್ ನಂತರ ದೊಡ್ಡ ನಗರಗಳಿಂದ ಮನೆಗೆ ಹಿಂದಿರುಗಲು ವಲಸೆ ಕಾರ್ಮಿಕರು ಸಾಕಷ್ಟು ಪರದಾಡಿದ ಸಂಗತಿಗಳನ್ನು ದೇಶ ಕಂಡಿದೆ.
ಸಾಂಕ್ರಾಮಿಕ ರೋಗದ ಮೂರನೇ ಅಲೆಯಲ್ಲಿ, ಇದೇ ರೀತಿಯ ದೃಶ್ಯವನ್ನು ಮತ್ತೊಮ್ಮೆ ನೋಡಲಾಗುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರದಿಂದ ವಲಸೆ ಬಂದ ಕಾರ್ಮಿಕರು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ನಲ್ಲಿ ಬೀಡುಬಿಟ್ಟಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೋಗುವ ಬಹುತೇಕ ರೈಲುಗಳು ಇಲ್ಲಿಂದ ಹೊರಡುತ್ತವೆ.
ವಲಸಿಗರು ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಲಾಠಿ ಏಟು ತಿನ್ನಬೇಕಾಯಿತು, ರೈಲು ಟಿಕೆಟ್ ಕೂಡ ಸಿಗದೆ ಪರದಾಡಿದರು. ಇಷ್ಟಾದರೂ ಅವರು ಅಲ್ಲಿಂದ ಕದಲಲಿಲ್ಲ. ಕಾರಣ, ಮುಂಬೈನಲ್ಲಿ ಲಾಕ್ಡೌನ್ ಆದರೆ ಅಂತ . ಹಾಗಾಗಿ ಲಾಕ್ಡೌನ್ಗೂ ಮುನ್ನ ಪ್ರತಿಯೊಬ್ಬರೂ ತಮ್ಮ ಹಳ್ಳಿಗಳು ಮತ್ತು ಮನೆಗಳನ್ನು ತಲುಪಲು ಪ್ರಯತ್ನಿಸುತ್ತಿದ್ದರು. ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಲಾಕ್ಡೌನ್ನ ಭಯದಿಂದ ವಲಸೆಗಾರರು ,ಕಾರ್ಮಿಕರು ತುಂಬಾ ಭಯಭೀತರಾಗಿದ್ದಾರೆ.
ನಿಲ್ದಾಣದ ಹೊರಗೆ ಮತ್ತು ಒಳಗೆ ಯಾವುದೇ ಸ್ಕ್ಯಾನಿಂಗ್ ಆಗಲಿ , ಸಾಮಾಜಿಕ ಅಂತರವಾಗಲಿ ಗೋಚರಿಸಲಿಲ್ಲ. ಅನೇಕರು ಮಾಸ್ಕ್ ಕೂಡ ಧರಿಸಿರಲಿಲ್ಲ. ಹಲವರು ಟಿಕೆಟ್ ಇಲ್ಲದೆ ರೈಲು ಹತ್ತಿದ್ದರು. ಜನರಲ್ ಕಂಪಾರ್ಟ್ ಮೆಂಟ್ ಕೂಡ ಭರ್ತಿಯಾಯಿತ್ತು. ಯುಪಿ-ಬಿಹಾರಕ್ಕೆ ಸೇರಿದ ಈ ರೈಲುಗಳು ಕೊರೊನಾದ ಸೂಪರ್ ಸ್ಪ್ರೆಡರ್ ಕೂಡ ಆಗಬಹುದು.