Monday, November 29, 2021

ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ವಿರುದ್ದ ಸಲ್ಲಿಸಿದ್ದ ಅರ್ಜಿ ವಜಾ..!

Must read

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕ ಸನ್ ರೈಸ್ ಓವರ್ ಅಯೋಧ್ಯೆ ಒಂದಿಲ್ಲೊಂದು ಕಾರಣಗಾಗಿ ನಿರಂತರ ವಿವಾದಗಳಲ್ಲಿ ಸಿಲುಕಿದೆ.ಇದೀಗ ಖುರ್ಷಿದ್​ರಿಂದ ಪರಿಹಾರ, ಪುಸ್ತಕ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಾಲಯ ತನ್ನ ತೀರ್ಪಿನಲ್ಲಿ ಜನರು ತುಂಬಾ ಸಂವೇದನಾಶೀಲರಾಗಿದ್ದರೆ, ನಾವು ಏನು ಮಾಡಲಿಕ್ಕಾಗುತ್ತೆ..? ಪುಸ್ತಕವನ್ನು ಓದಲು ಯಾರೂ ಅವರನ್ನು ಕೇಳಿಯೇ ಇಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ವಾಸ್ತವವಾಗಿ, ಈ ಪುಸ್ತಕದಲ್ಲಿ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಮತ್ತು ಬೊಕೊ ಹರಾಮ್​ನಂತಹ ತೀವ್ರಗಾಮಿ ಗುಂಪುಗಳಿಗೆ ಹೋಲಿಸಿದ್ದರು. ಅಂದಿನಿಂದ ಈ ಪುಸ್ತಕದ  ವಿರುದ್ದ ವ್ಯಾಪಕ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಏತನ್ಮಧ್ಯೆ, ಸಲ್ಮಾನ್ ಖುರ್ಷಿದ್ ತಮ್ಮ ಪುಸ್ತಕ “ಸೂರ್ಯೋದಯ ಓವರ್ ಅಯೋಧ್ಯೆ” ಪ್ರಕಟಣೆ ಮತ್ತು ಮಾರಾಟಕ್ಕೆ ತಡೆ ನೀಡುವಂತೆ ಕೋರಿ ದೆಹಲಿ ವಕೀಲ ವಿನೀತ್ ಜಿಂದಾಲ್ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಹಿಂದುತ್ವವನ್ನು ಐಸಿಸ್ ಮತ್ತು ಬೊಕೊ ಹರಾಮ್ ಅಂತಹ ಭಯೋತ್ಪಾದಕ ಸಂಘಟನೆಗಳಿಗೆ ಪುಸ್ತಕದಲ್ಲಿ ಹೋಲಿಸಲಾಗಿದೆ. ಇದು ದೇಶದ ಲಕ್ಷಾಂತರ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಜನರು ತುಂಬಾ ಸೂಕ್ಷ್ಮ ಭಾವನೆ ಹೊಂದಿದ್ದರೆ ನಾವು ಏನು ಮಾಡಲಾಗುತ್ತೆ ಎಂದು ಹೇಳುವ ಮೂಲಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಪುಸ್ತಕವನ್ನು ಓದಲು ಯಾರೂ ಯಾರನ್ನೂ ಒತ್ತಾಯಿಸಿಲ್ಲ.. ಹಾಗಾಗಿ ನೀವು ಕಣ್ಣು ಮುಚ್ಚಿಕೊಳ್ಳಿ ಅಥವಾ ಪುಸ್ತಕವನ್ನು ಓದಬೇಡಿ ಎಂದು ಕೋರ್ಟ್​ ಹೇಳಿದೆ.

 

Latest article