Thursday, January 27, 2022

ಪರಶುರಾಮನ‌ ಕೊಡಲಿ ಕೆಳ ಬಿದ್ದ ಹಿನ್ನಲೆ ಯೂಪಿಯಲ್ಲಿ ಶುರುವಾಯ್ತು ಶಕುನ- ಅಪಶಕುನಗಳ ಮಾತು

Must read

ಪರಶುರಾಮನ ಕೈಯಿಂದ ಕೊಡಲಿ ನೆಕ್ಕೆ ಉರುಳಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 8 ದಿನಗಳ ಹಿಂದೆಯಷ್ಟೆ ಅನಾವರಣಗೊಂಡಿದ್ದ ಪ್ರತಿಮೆ ಈಗ ಹಲವು ಶಕುನ- ಅಪಶಕುನಗಳಿಗೆ ಕಾರಣವಾಗಿದೆ .

ಎಂಟು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪರಶುರಾಮನ ಪ್ರತಿಮೆ ಉದ್ಘಾಟಿಸಿದ್ರು. ಅದಾದ ಎಂಟು ದಿನಕ್ಕೆ ಪರಶುರಾಮನ‌ ಕೊಡಲಿ ನೆಲಕ್ಕುರುಳಿತ್ತು. ಇದು ಪಕ್ಷಕ್ಕೆ ಅಶುಭ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನು ಉತ್ತರ ಪ್ರದೇಶದ ಲಕ್ನೊದಲ್ಲಿ 68 ಅಡಿ ಎತ್ತರದ ಪ್ರತಿಮೆಯನ್ನ ಅನಾವರಣಗೊಳಿಸಲಾಗಿತ್ತು. ಇನ್ನು ಕೊಡಲಿ ತಾನಾಗಿಯೇ ಬಿದ್ದಿದ್ದಲ್ಲ ದೀಪ ಸರಿ ಮಾಡುವ ಸಂಧರ್ಭದಲ್ಲಿ ಕೆಳಗೆ ಇಡಲಾಗಿದೆ ತೂಕ ಹೆಚ್ಚಿದ್ದ ಕಾರಣ ಅದನ್ನ ಅದು ಕೈಯಿಂದ ಜಾರಿ ಬಿದ್ದಿದೆ .ಅದನ್ನ ಮತ್ತೆ ಪುನರ್ ಸ್ಥಾಪಿಸುತ್ರೆವೆಂದು ಸಂಬಂಧ ಸಮಾಜವಾದಿ ಪಕ್ಷದ ಮಾಜಿ ಶಾಸಕ ಸಂತೋಷ್ ಹೇಳಿದ್ದಾರೆ. ಅದೇನೆ ಇರಲಿ ಕೊಡಲಿ ಬಿದ್ದಿರುವ ಹಿನ್ನಲೆ ಹಲವು ಆರೋಪ – ಪ್ರತ್ಯಾರೋಪಗಳು ಬಂದಿದ್ದು ಅಪಶಕುನದ ಬಗ್ಗೆಯೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.

Latest article