Monday, January 30, 2023

ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಎತ್ತುಗಳ ಸಾವು

Must read

ವೈದ್ಯರ ನಿರ್ಲಕ್ಷ್ಯಕ್ಕೆ ಲಕ್ಷಾಂತರ ಮೌಲ್ಯದ ಎತ್ತುಗಳು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ನಡೆದಿದೆ. ಉಡೇವಾ ಗ್ರಾಮದ ಶಂಕರ್ ಎಂಬುವರಿಗೆ ಸೇರಿದ ಎತ್ತುಗಳಾಗಿದ್ದು, ಆರೋಗ್ಯ ಸರಿ ಇಲ್ಲವೆಂದು ಎತ್ತುಗಳನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪಶುವೈದ್ಯ ಬಸವರಾಜ್ ಎಂಬಾತ ಎತ್ತುಗಳಿಗೆ ಇಂಜೆಕ್ಷನ್ ನೀಡಿದ್ದಾನೆ. ಇನ್ನು ವೈದ್ಯರು ಇಂಜೆಕ್ಷನ್ ನೀಡಿದ ಮರುದಿನವೇ ರಾಸುಗಳು ಸಾವನ್ನಪ್ಪಿದ್ದವೆ. ಗಂಟಲು ಬೇನೆ ಎಂದು ವೈದ್ಯರು ಇಂಜೆಕ್ಷನ್ ನೀಡಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಎತ್ತುಗಳು ಬಲಿಯಾಗಿದೆ ಎಂದು ಸ್ಥಳಿಯರು ರೊಚ್ಚಿಗೆದ್ದಿದ್ದಾರೆ. ಪಶು ಆಸ್ಪತ್ರೆ ಮುಂದೆ ಸಾವನ್ನಪ್ಪಿದ ಎತ್ತುಗಳ ಶವವನ್ನು  ಇಟ್ಟು ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದಾರೆ.

Latest article