ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್​: ಮೂವರು ಸಾವು, ಹಲವರು ನಾಪತ್ತೆ

ವಾರ್ಧಾ ನದಿಯಲ್ಲಿ ಮುಳುಗಿದ ಬೋಟ್​: ಮೂವರು ಸಾವು, ಹಲವರು ನಾಪತ್ತೆ

ಮಹಾರಾಷ್ಟ್ರ: ವಾರ್ಧಾ ನದಿಯಲ್ಲಿ ಬೋಟ್ ಮುಳುಗಿ 11 ಮಂದಿ ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.

ಅಮರಾವತಿ ಜಿಲ್ಲೆಯ ಹತ್ರಾಣಾ ಗ್ರಾಮದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಒಂದೇ ಕುಟುಂಬದ 11 ಜನರು ನದಿಯ ದಡದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿ ದೋಣಿ ಮೂಲಕ ವಾಪಸ್ಸಾಗುತ್ತಿದ್ದರು. ಈ ವೇಳೆ ದೋಣಿ 11 ಜನರ ತೂಕ ತಡೆಯಲಾರದೇ ಮಗುಚಿದೆ.

ನಾಪತ್ತೆಯಾದವರ ಪೈಕಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೂರರಲ್ಲಿ ಒಂದು ಮಗು ಕೂಡ ಸೇರಿದೆ. ಉಳಿದ 8 ಜನರಿಗಾಗಿ ತೀವ್ರ ಶೋಧಕಾರ್ಯ ನಡೆಸಲಾಗುತ್ತಿದೆ.

Related Stories

No stories found.
TV 5 Kannada
tv5kannada.com