ಮುಂಬೈ ಷೇರುಪೇಟೆಯ ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ದಾಖಲೆ ಅಂಕಗಳ ವಹಿವಾಟು

 ಮುಂಬೈ ಷೇರುಪೇಟೆಯ ನಿಫ್ಟಿ, ಸೆನ್ಸೆಕ್ಸ್  ಸಾರ್ವಕಾಲಿಕ ಗರಿಷ್ಠ ದಾಖಲೆ ಅಂಕಗಳ ವಹಿವಾಟು

ಮುಂಬೈ: ಅಮೆರಿಕದ ಹಣದುಬ್ಬರದ ಏರಿಳಿಕೆಯ ಕಳವಳದ ನಡುವೆಯೂ ಹೂಡಿಕೆದಾರರ ಖರೀದಿಯ ಭರಾಟೆಯ ಪರಿಣಾಮ ಇಂದು ಷೇರುಪೇಟೆಯ ಸೆನ್ಸೆಕ್ಸ್ ಮತ್ತು ನಿಫ್ಟಿ ದಾಖಲೆಯ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 476 ಅಂಕ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 58,723 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಇದೇ ರೀತಿ ಎನ್​ಎಸ್​ಇ ನಿಫ್ಟಿ ಕೂಡಾ 139 ಅಂಕ ಏರಿಕೆಯೊಂದಿಗೆ ದಾಖಲೆಯ 17,519 ಅಂಕಗಳ ಗಡಿ ತಲುಪಿದೆ. ನಿಫ್ಟಿ ಜಿಗಿತದ ಪರಿಣಾಮ ಎನ್​ಟಿಪಿಸಿ, ಏರ್​ಟೆಲ್, ಎಚ್​ಸಿಎಲ್ ಟೆಕ್, ಟೈಟಾನ್, ಎಸ್​ಬಿಐ, ಪವರ್ ಗ್ರಿಡ್, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್ ಹಾಗೂ ಇನ್ಫೋಸಿಸ್ ಷೇರುಗಳು ಭರ್ಜರಿ ಲಾಭಗಳಿಸಿವೆ.

ಆ್ಯಕ್ಸಿಸ್​ ಬ್ಯಾಂಕ್, ಏಷ್ಯನ್ ಪೇಂಟ್ಸ್, ಆಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ, ಸನ್ ಫಾರ್ಮಾ, ಎಚ್​ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್​ಸಿ ಷೇರುಗಳು ನಷ್ಟ ಕಂಡಿವೆ.

ಪ್ರಸಾದ್​​ ಎಸ್ ಹಿರೇಮಠ, ಟಿವಿ5

Related Stories

No stories found.
TV 5 Kannada
tv5kannada.com